ಪುರಿ(ಒಡಿಶಾ):ಗ್ರಾಮವೊಂದರ ಮೇಲೆ ಜನರ ಗುಂಪೊಂದು ಸುಮಾರು 20ಕ್ಕೂ ಹೆಚ್ಚು ಬಾಂಬ್ಗಳನ್ನು ಎಸೆದ ಪರಿಣಾಮ ಸುಮಾರು 30 ಮನೆಗಳಿಗೆ ಹಾನಿಯಾಗಿರುವ ಘಟನೆ ಒಡಿಶಾದ ಪುರಿ ಜಿಲ್ಲೆಯ ಸತ್ಪಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಥಪುರ್ ಎಂಬ ಗ್ರಾಮದಲ್ಲಿ ಬಾಂಬ್ಗಳ ದಾಳಿ ನಡೆದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ದೀರ್ಘಕಾಲದ ಭೂ ವಿವಾದ ಘರ್ಷಣೆ ವೇಳೆ ಬಾಂಬ್ಗಳನ್ನು ಎಸೆಯಲಾಗಿದೆ. ಸ್ಥಳಕ್ಕೆ ಪುರಿಯ ಹೆಚ್ಚುವರಿ ಎಸ್ಪಿ ಹಾಗೂ ಬ್ರಹ್ಮಗಿರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.