ನವದೆಹಲಿ :ರೈಲುಗಳಲ್ಲಿನ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2020ರಲ್ಲಿ ದೇಶದಲ್ಲಿ 17 ಸಾವಿರಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಾಹಿತಿ ನೀಡಿದರು.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 2019ರಲ್ಲಿ 54,552 ಎಫ್‌ಐಆರ್ ದಾಖಲಾಗಿದ್ದರೆ, 2018ರಲ್ಲಿ 55,780 ಪ್ರಕರಣ ದಾಖಲಾಗಿವೆ. 2020ನೇ ವರ್ಷದಲ್ಲಿ ಕೋವಿಡ್ ಹಿನ್ನೆಲೆ ಸ್ಥಗಿತಗೊಂಡ ಕಾರಣದಿಂದ ಕೇವಲ 17,125 ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
2020ನೇ ವರ್ಷದಲ್ಲಿ ರೈಲುಗಳಲ್ಲಿ ನಡೆದ ಅಪರಾಧಗಳ ಮಾಹಿತಿ ರೈಲುಗಳಲ್ಲಿ ನಡೆದಿರುವ ಅಪರಾಧದ ಬಗ್ಗೆ ಮಾಹಿತಿ ಬೇಕಾದರೆ ರಾಜ್ಯ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ನೀಡುತ್ತದೆ ಎಂದಿರುವ ಅವರು, ಪ್ರಯಾಣಿಕರಿಗೆ ಉತ್ತಮ ರಕ್ಷಣೆ ಮತ್ತು ಸುರಕ್ಷತೆಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಒದಗಿಸುತ್ತದೆ ಎಂದು ಗೋಯಲ್ ತಿಳಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿಂದು 368 ಮಂದಿಯಲ್ಲಿ ಕೊರೊನಾ: ಇಬ್ಬರು ಬಲಿ
ಈಗಾಗಲೇ ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು 2,931 ರೈಲುಗಳು ಮತ್ತು 668 ರೈಲ್ವೆ ನಿಲ್ದಾಣಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಹೊಸದಾಗಿ ತಯಾರಿಸಿದ ಎಲ್ಲಾ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (ಇಎಂಯು) ಮತ್ತು ಕೋಲ್ಕತಾ ಮೆಟ್ರೋದ ಹವಾನಿಯಂತ್ರಿತ ರೈಲುಗಳಲ್ಲಿ ತುರ್ತು ಟಾಕ್ ಬ್ಯಾಕ್ ಸಿಸ್ಟಮ್ ಮತ್ತು ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ ಕಣ್ಗಾವಲು ಕ್ಯಾಮೆರಾಗಳನ್ನು ಒದಗಿಸಲಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.