ಹರಿದ್ವಾರ(ಉತ್ತರಾಖಂಡ್):ಮಹಾಮಾರಿ ಕೊರೊನಾ ವೈರಸ್ ಹಾವಳಿ ನಡುವೆ ಕೂಡ ಉತ್ತರಾಖಂಡ್ದ ಹರಿದ್ವಾರದಲ್ಲಿ ಗಂಗಾ ಆರತಿ ನಡೆಯುತ್ತಿದ್ದು, ಇದರಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭಮೇಳ ಆಯೋಜನೆ ಮಾಡಲಾಗಿದ್ದು, ಅಲ್ಲಿ ನಡೆಯುತ್ತಿರುವ ಗಂಗಾ ಆರತಿಯಲ್ಲಿ ಸಾವಿರಾರು ಭಕ್ತರಲ್ಲಿ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 1,700 ಜನರಲ್ಲಿ ಮಹಾಮಾರಿ ಕಾಣಿಸಿಕೊಂಡಿದ್ದು, ಇದೀಗ ಕುಂಭಮೇಳ ಕೋವಿಡ್ ಹಾಟ್ಸ್ಪಾಟ್ ಆಗಿ ಮಾರ್ಪಟ್ಟಿದೆ. ಏಪ್ರಿಲ್ 10ರಿಂದ 14ರವರೆಗೆ ಈ ಸಮಾರಂಭ ನಡೆದಿದ್ದು, ಇಷ್ಟೊಂದು ಸೋಂಕಿತ ಪ್ರಕರಣ ದಾಖಲಾಗಿವೆ.