ಕರ್ನಾಟಕ

karnataka

ETV Bharat / bharat

ಯುಪಿ ವಿಧಾನಸಭಾ ಚುನಾವಣೆ: ಮೊದಲ ಬಾರಿ ಹಕ್ಕು ಚಲಾಯಿಸಲಿರುವ 14.66 ಲಕ್ಷ ಮತದಾರರೇ ನಿರ್ಣಾಯಕ - Uttar Pradesh assembly election

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಯಾರಿ ನಡೆಯುತ್ತಿದೆ. ಈ ವರ್ಷ ಮೊದಲ ಬಾರಿಗೆ 18 -19 ವರ್ಷ ವಯಸ್ಸಿನ 14.66 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅಜಯ್ ಶುಕ್ಲಾ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡುವಾಗ ತಿಳಿಸಿದ್ದಾರೆ.

VOTERS
VOTERS

By

Published : Jan 6, 2022, 6:49 AM IST

Updated : Jan 6, 2022, 7:14 AM IST

ಲಖನೌ( ಉತ್ತರಪ್ರದೇಶ): ಮುಂಬರುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 18-19 ವರ್ಷ ವಯಸ್ಸಿನ 14.66 ಲಕ್ಷಕ್ಕೂ ಹೆಚ್ಚು ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಇವರೇ ಉತ್ತರ ಪ್ರದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಯೂ ಇದೆ. ಯುವಕರು ಯಾರ ಕಡೆ ಒಲಿಯುತ್ತಾರೋ ಆ ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆಗಳಿವೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟು 52,80,882 ಮತದಾರರ ಹೆಸರು ಸೇರ್ಪಡೆಯಾಗಿದೆ.

ಇದರಲ್ಲಿ 23,92,258 ಪುರುಷರು, 28,86,988 ಮಹಿಳೆಯರು ಮತ್ತು 1,636 ಟ್ರಾನ್ಸ್‌ಜೆಂಡರ್‌ಗಳನ್ನು ಒಳಗೊಂಡಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅಜಯ್ ಶುಕ್ಲಾ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡುವಾಗ ತಿಳಿಸಿದ್ದಾರೆ.

18-19 ರ ವಯೋಮಿತಿಯಲ್ಲಿ ಒಟ್ಟು 14,66,470 ಹೆಸರುಗಳನ್ನು ಸೇರಿಸಲಾಗಿದೆ. ಪ್ರಸ್ತುತ ಮತದಾರರ ಪಟ್ಟಿಯಲ್ಲಿ 18-19 ವಯೋಮಾನದ ಒಟ್ಟು ಮತದಾರರ ಸಂಖ್ಯೆ 19,89,902 ಇದ್ದು, ಇದರಲ್ಲಿ 10,62,410 - ಪುರುಷರು ಹಾಗೂ 9,26,945 - ಮಹಿಳೆಯರು ಮತ್ತು 547 - ತೃತೀಯ ಲಿಂಗಿಗಳು ಇದ್ದಾರೆ.

ಪರಿಷ್ಕರಣೆ ವೇಳೆ ವಿವಿಧ ವರ್ಗಗಳ ಒಟ್ಟು 21,40,278 ಮತದಾರರ ಹೆಸರುಗಳನ್ನು ಕೈ ಬಿಡಲಾಗಿದೆ. ಈ ಪೈಕಿ 10,00,050 ಮಂದಿ ಮೃತಪಟ್ಟಿದ್ದಾರೆ. ವರ್ಗಾವಣೆಗೊಂಡ ವರ್ಗದಲ್ಲಿ 3,32,905 ಮತ್ತು ಪುನರಾವರ್ತಿತ ವರ್ಗದಲ್ಲಿ 7,94,029 ಹೆಸರುಗಳನ್ನು ಅಳಿಸಲಾಗಿದೆ ಎಂದು ಅಧಿಕಾರಿ ಶುಕ್ಲಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 15,02,84,005ಕ್ಕೆ ಏರಿಕೆಯಾಗಿದೆ. 10,64,266 ದಿವ್ಯಾಂಗ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 24,03,296 ಮತದಾರರಿದ್ದಾರೆ. ಅಂತಿಮ ಪ್ರಕಟಿತ ಮತದಾರರ ಪಟ್ಟಿಯನ್ನು ಒಂದು ವಾರದೊಳಗೆ ಎಲ್ಲ ಮತಗಟ್ಟೆಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಜೊತೆಗೆ ಮುಖ್ಯ ಚುನಾವಣಾಧಿಕಾರಿಗಳು ಅಥವಾ ಜಿಲ್ಲಾ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿಯೂ ಪಟ್ಟಿ ಲಭ್ಯವಿರುತ್ತದೆ. ಮತದಾರರು ಹೆಚ್ಚನ ವಿಚಾರಣೆಗಾಗಿ ಟೋಲ್ ಫ್ರೀ ಸಂಖ್ಯೆ 1950 ಕ್ಕೆ ಕರೆ ಮಾಡಬಹುದು ಎಂದರು.

ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಆದಾಗ್ಯೂ, ಯಾವುದಾದರೂ ಮತದಾರರು ಹೊರಗುಳಿದಿದ್ದರೆ ಅವರು ತಮ್ಮ ಹೆಸರನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮಾಧ್ಯಮದ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸಿಇಒ ಅಜಯ್ ಶುಕ್ಲಾ ಹೇಳಿದ್ದಾರೆ.

ಓದಿ:UKಯಲ್ಲಿ ಕೋವಿಡ್​ ರುದ್ರತಾಂಡವ: ಒಂದೇ ದಿನ 1,94,747 ಕೋವಿಡ್ ಪಾಸಿಟಿವ್​​

Last Updated : Jan 6, 2022, 7:14 AM IST

ABOUT THE AUTHOR

...view details