ಕರ್ನಾಟಕ

karnataka

ETV Bharat / bharat

5 ವರ್ಷಗಳಲ್ಲಿ 1000 ಉಗ್ರರು ಹತ: 626 ಎನ್​ಕೌಂಟರ್ - ಭದ್ರತಾ ಪಡೆಗಳು 480 ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ

ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಭಯೋತ್ಪಾದಕರೊಂದಿಗೆ 626 ಎನ್​ಕೌಂಟರ್​ಗಳು ನಡೆದಿವೆ.

Over 1000 terrorists, 306 security personnel killed in J&K: Govt tells RS
Over 1000 terrorists, 306 security personnel killed in J&K: Govt tells RS

By

Published : Feb 8, 2023, 7:02 PM IST

ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಐದು ವರ್ಷಗಳಲ್ಲಿ 1000 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು 99 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ರಾಜ್ಯಸಭೆಗೆ ತಿಳಿಸಿದೆ. ಈ ಅಂಕಿ - ಅಂಶಗಳನ್ನು ರಾಜ್ಯ ಸಚಿವ (ಗೃಹ) ನಿತ್ಯಾನಂದ ರೈ ಲಿಖಿತ ಉತ್ತರದಲ್ಲಿ ಹಂಚಿಕೊಂಡಿದ್ದಾರೆ. ಗೃಹ ಖಾತೆ ರಾಜ್ಯ ಸಚಿವರು ಹಂಚಿಕೊಂಡ ಅಂಕಿ ಅಂಶಗಳ ಪ್ರಕಾರ 2018 ರಿಂದ 2022 ರವರೆಗೆ 1002 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಮತ್ತು ಅದೇ ಸಮಯದಲ್ಲಿ 306 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ 761 ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಿದ್ದಾರೆ ಮತ್ತು ಅದೇ ಸಮಯದಲ್ಲಿ 626 ಎನ್‌ಕೌಂಟರ್‌ಗಳು ನಡೆದಿವೆ.

2018 ರಿಂದ 2022 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 480 ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2022-23 ರಲ್ಲಿ ಸ್ಥಾಪಿಸಲಾದ ಗ್ರಾಮ ರಕ್ಷಣಾ ಗುಂಪುಗಳ (ವಿಡಿಜಿ) ಸಂಖ್ಯೆಯ ಪ್ರಕಾರ, ಹಣಕಾಸು ವರ್ಷ 2022-23 ರಲ್ಲಿ ಯಾವುದೇ ಹೊಸ VGS ಅನ್ನು ಸ್ಥಾಪಿಸಲಾಗಿಲ್ಲ ಮತ್ತು ಅಸ್ತಿತ್ವದಲ್ಲಿರುವ ವಿಡಿಜಿಗಳು ಮುಂದುವರೆಯುತ್ತಿವೆ ಎಂದು ಸಚಿವರು ಹೇಳಿದರು.

ವಿಡಿಜಿಎಸ್‌ನ ಮಂಜೂರಾತಿ ಸಾಮರ್ಥ್ಯವು 4985 ಆಗಿದ್ದು, ಅದರಲ್ಲಿ 4153 ವಿಡಿಜಿಎಸ್ ಸ್ಥಾಪಿಸಲಾಗಿದೆ. ಗೃಹ ಸಚಿವಾಲಯದ 02.03.2022 ರ ಪತ್ರದ ಪ್ರಕಾರ ಪ್ರತಿ ವಿಡಿಜಿಯಲ್ಲಿ 15 ಕ್ಕಿಂತ ಹೆಚ್ಚು ಸದಸ್ಯರಿರಬಾರದು ಎಂದು ನಿರ್ಧರಿಸಿದೆ ಎಂದು ಗೃಹಖಾತೆ ರಾಜ್ಯ ಸಚಿವರು ಮಾಹಿತಿ ನೀಡಿದರು.

ಗ್ರಾಮ ರಕ್ಷಣಾ ಗುಂಪಿನ ಸದಸ್ಯರನ್ನು ವಿಲೇಜ್ ಡಿಫೆನ್ಸ್ ಗಾರ್ಡ್ (ವಿಡಿಜಿ) ಎಂದು ಗೊತ್ತುಪಡಿಸಲಾಗುತ್ತದೆ. ಹೆಚ್ಚು ಅಪಾಯದ ಪ್ರದೇಶಗಳಲ್ಲಿ ವಿಡಿಜಿಗಳನ್ನು ಮುನ್ನಡೆಸುವ / ಸಮನ್ವಯಗೊಳಿಸುವ ವ್ಯಕ್ತಿಗಳಿಗೆ ತಿಂಗಳಿಗೆ 4,500 ರೂಪಾಯಿ ಪಾವತಿಸಲಾಗುತ್ತದೆ ಮತ್ತು ಆ ವ್ಯಕ್ತಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ವಿಡಿಜಿಗಳ ಸದಸ್ಯರಿಗೆ ತಿಂಗಳಿಗೆ 4000 ರೂಪಾಯಿಗಳ ಏಕರೂಪದ ದರವನ್ನು ಪಾವತಿಸಲಾಗುತ್ತದೆ ಎಂದು ಅವರು ಹೇಳಿದರು. ಜನವರಿ 6, 2023 ರಿಂದ ಜನವರಿ 25, 2023 ರವರೆಗೆ ಜಿಲ್ಲಾ ಪೊಲೀಸ್ ರಜೌರಿ ಸಹಯೋಗದೊಂದಿಗೆ CRPF 948 ವಿಡಿಜಿ ಸದಸ್ಯರಿಗೆ ಅಗತ್ಯ ತರಬೇತಿ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಅತ್ತ ಸಚಿವರು ಸಂಸತ್​ನಲ್ಲಿ ಅಂಕಿ - ಸಂಖ್ಯೆ ಹಂಚಿಕೊಳ್ಳುತ್ತಿದ್ದರೆ, ಅತ್ತ ಕಾಶ್ಮೀರದ ರಾಜೌರಿ ಜಿಲ್ಲೆಯ ಧಂಗ್ರಿ ಗ್ರಾಮದ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ರಜೌರಿ ಜಿಲ್ಲೆಯ ಮೇಲ್ಭಾಗದಲ್ಲಿ ಅಡಗಿಕೊಂಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದು, ಅವರ ಬಗ್ಗೆ ಮಾಹಿತಿ ನೀಡುವವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಮಂಗಳವಾರ ರಾತ್ರಿ ಹೊರಡಿಸಲಾದ ಪ್ರಕಟಣೆಯಲ್ಲಿ, ಭಯೋತ್ಪಾದಕರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜನವರಿ 1 ರಂದು ರಾಜೌರಿಯ ಧಂಗ್ರಿ ಗ್ರಾಮದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಏಳು ಜನ ಸಾವನ್ನಪ್ಪಿದ್ದರು ಮತ್ತು 14 ಮಂದಿ ಗಾಯಗೊಂಡಿದ್ದರು. ಕೆಲವು ಮನೆಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ ಇಬ್ಬರು ಸಹೋದರರು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದರೆ, ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿದ ಕಾರಣದಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಬಂಧಿತ ಉಗ್ರರು ಗ್ರೆನೇಡ್​ ದಾಳಿಗೆ ಸಂಚು ರೂಪಿಸಿದ್ದರು: ಎನ್​ಐಎ

ABOUT THE AUTHOR

...view details