ನವದೆಹಲಿ: ಆರು ದಿನಗಳ ಲಾಕ್ಡೌನ್ನ ಮೊದಲ ದಿನ ಸೋಮವಾರ ದೆಹಲಿಯ ಬೀದಿಗಳು ಬಿಕೋ ಎನ್ನುತ್ತಿದ್ದವು. ರಸ್ತೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟ ಆಸ್ಪತ್ರೆಗಳ ಬಳಿ ಆ್ಯಂಬುಲೆನ್ಸ್ಗಳ ಸದ್ದು ಮಾತ್ರ ಹೆಚ್ಚಾಗಿ ಕೇಳಿ ಬರುತ್ತಿತ್ತು.
ಕಳೆದ 7 ದಿನಗಳಲ್ಲಿ (ಏಪ್ರಿಲ್ 14 ರಿಂದ 20 ರವರೆಗೆ) ರಾಜಧಾನಿಯಲ್ಲಿ ಮಹಾಮಾರಿಗೆ 1,200ಕ್ಕಿಂತಲೂ ಅಧಿಕ (1,202) ರೋಗಿಗಳು ಬಲಿಯಾಗಿದ್ದಾರೆ. ಮಂಗಳವಾರ ಪ್ರತಿನಿತ್ಯದ ಅತ್ಯಧಿಕ 277 ಸಾವು ಸಂಭವಿಸಿದೆ. ಈ ಮೂಲಕ ದೆಹಲಿಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ ಇದುವರೆಗೆ 12,638 ಆಗಿದೆ.