ನವದೆಹಲಿ: ಜಾಮೀನಿನ ಮೇಲೆ ಹೊರಗಡೆ ಇರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಗಾನಂದ್ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ, ಶೇ.50ರಷ್ಟು ಹಿಂದೂಗಳು ಇಸ್ಲಾಂಗೆ ಮತಾಂತರವಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ದೆಹಲಿಯ ಬುರಾರಿ ಮೈದಾನದಲ್ಲಿ ಭಾನುವಾರ ಹಿಂದೂ ಮಹಾಪಂಚಾಯತ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವು ಹಿಂದೂ ನಾಯಕರು ಪಾಲ್ಗೊಂಡಿದ್ದರು. ಮಹಾಪಂಚಾಯತ್ ಉದ್ದೇಶಿಸಿ ಯತಿ ನರಸಿಂಗಾನಂದ್ ಮಾತನಾಡಿದ್ದಾರೆ. '2029 ಅಥವಾ 2034 ಅಥವಾ 2039ರಲ್ಲಿ ಮಾತ್ರ ಮುಸ್ಲಿಂ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವಿದೆ. ಒಂದು ವೇಳೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ, ಶೇ.50ರಷ್ಟು ಹಿಂದೂಗಳು ಇಸ್ಲಾಂಗೆ ಮತಾಂತರವಾಗಲಿದ್ದಾರೆ. ಉಳಿದ ಶೇ.40ರಷ್ಟು ಹಿಂದೂಗಳು ಕೊಲೆಯಾಗಲಿದ್ದಾರೆ. ಇನ್ನುಳಿದ ಶೇ.10ರಷ್ಟು ಜನ ನಿರಾಶ್ರಿತ ಕ್ಯಾಂಪ್ಗಳು ಅಥವಾ ಬೇರೆ ರಾಷ್ಟ್ರಗಳಿಗೆ ಹೋಗಿ ನೆಲೆಬೇಕಾಗುತ್ತದೆ. ಇದು ಹಿಂದೂಗಳ ಮುಂದಿನ ಭವಿಷ್ಯ. ಇಂತಹ ಭವಿಷ್ಯವನ್ನು ತಪ್ಪಿಸಬೇಕಾದರೆ ಶಸ್ತ್ರಸಜ್ಜಿತರಾಗಿ' ಎಂದು ಯತಿ ನರಸಿಂಗಾನಂದ್ ಹೇಳಿದ್ದಾರೆ.