ಕರ್ನಾಟಕ

karnataka

ETV Bharat / bharat

ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಅಡ್ಡಿಪಡಿಸಲು ಜನರು ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ: ಮೋದಿ - PM Modi in Saharanpur rally

ನಮ್ಮ ಸರ್ಕಾರ ಪ್ರತಿ ಸಂತ್ರಸ್ತ ಮುಸ್ಲಿಂ ಮಹಿಳೆಯೊಂದಿಗೆ ನಿಂತಿದೆ. ಆದರೆ ಜನರು ಮುಸ್ಲಿಂ ಸಹೋದರಿಯರು ತಮ್ಮ ಹಕ್ಕುಗಳನ್ನು ಪಡೆಯದಂತೆ ಅಡ್ಡಗಾಲು ಹಾಕಲು ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ ಎಂದು ಹಿಜಾಬ್​ ವಿವಾದದ ಬೆನ್ನಲ್ಲೇ ಪ್ರಧಾನಿ ಮೋದಿ ಹೇಳಿದರು.

PM Modi on hijab row
ಹಿಜಾಬ್​ ವಿವಾದದ ಬಗ್ಗೆ ಮೋದಿ ಮಾತು

By

Published : Feb 10, 2022, 1:39 PM IST

Updated : Feb 10, 2022, 2:05 PM IST

ಸಹರಾನ್ಪುರ (ಉತ್ತರ ಪ್ರದೇಶ):ಕರ್ನಾಟಕದಲ್ಲಿ ಹಿಜಾಬ್​-ಕೇಸರಿ ಶಾಲು ವಿವಾದದ ಕಾವು ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಹೈಕೋರ್ಟ್​ ತೀರ್ಪು ಬರುವವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಮಹಿಳೆಯ ಕುರಿತು ಭರವಸೆಯ ಮಾತುಗಳನ್ನಾಡಿದ್ದಾರೆ.

ಯುಪಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಸರ್ಕಾರ 'ಹರ್ ಮಜ್ಲೂಮ್', ಪ್ರತಿ ಸಂತ್ರಸ್ತ ಮುಸ್ಲಿಂ ಮಹಿಳೆಯೊಂದಿಗೆ ನಿಂತಿದೆ. ಮುಸ್ಲಿಂ ಸಹೋದರಿಯರ ಬದುಕನ್ನು ಮತ್ತಷ್ಟು ಹಿಂದಕ್ಕೆ ತಳ್ಳುವ ಕೆಲಸ ನಡೆಯುತ್ತಿದೆ. ಇಂತಹ ಘಟನೆಗಳು ಮುಸ್ಲಿಂ ಹೆಣ್ಣು ಮಕ್ಕಳ ಜೀವನ ಯಾವಾಗಲೂ ಹಿಂದೆಯೇ ಇರುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಹಿಜಾಬ್ ಧರಿಸಿ ಫುಟ್ಬಾಲ್​ ಆಡಿದ ವಿದ್ಯಾರ್ಥಿನಿಯರು... ಟೀಕಾಕಾರರಿಗೆ ತಕ್ಕ ಉತ್ತರ!

ಮುಸ್ಲಿಂ ಸಹೋದರಿಯರು, ಮುಸ್ಲಿಂ ಹೆಣ್ಣುಮಕ್ಕಳು ನಮ್ಮ ಸರ್ಕಾರದ ಸ್ಪಷ್ಟ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ನಾವು ಅವರನ್ನು ತ್ರಿವಳಿ ತಲಾಕ್‌ನಿಂದ ಮುಕ್ತಗೊಳಿಸಿ ರಕ್ಷಣೆ ನೀಡಿದ್ದೇವೆ. 'ತೀನ್ ತಲಾಖ್' ನಿಷೇಧ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಮುಸ್ಲಿಂ ಮಹಿಳೆಯರು ಬೆಂಬಲಿಸಿದಾಗ ಓಟು ಕಲೆ ಹಾಕುವ ಈ 'ತೇಕೇದಾರ'ರರಿಗೆ ತಮ್ಮ ಮಕ್ಕಳು ಮೋದಿ, ಮೋದಿ ಎಂದು ಹೇಳುವುದನ್ನು ಸಹಿಸಲು ಸಾಧ್ಯವಾಗಲಿಲ್ಲ. ಅವರು ಮುಸ್ಲಿಂ ಸಹೋದರಿಯರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.

Last Updated : Feb 10, 2022, 2:05 PM IST

ABOUT THE AUTHOR

...view details