ಕರ್ನಾಟಕ

karnataka

ETV Bharat / bharat

ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು ನಮ್ಮ ಕರ್ತವ್ಯ: ಪುದುಚೇರಿಯಲ್ಲಿ ಮೋದಿ ಅಭಯ - ಪ್ರಧಾನಿ ನರೇಂದ್ರ ಮೋದಿ ರೈತರ ಬಗ್ಗೆ ಹೇಳಿಕೆ ಸುದ್ದಿ

ಪುದುಚೇರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಈ ವೇಳೆ ಪುದುಚೇರಿಯ ಮಾಜಿ ಸಿಎಂ ಮತ್ತು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Prime minister Narendra modi
ಪುದುಚೇರಿಯಲ್ಲಿ ಮೋದಿ

By

Published : Feb 25, 2021, 1:09 PM IST

ಪುದುಚೇರಿ:ರೈತರಉತ್ಪನ್ನಗಳು ಉತ್ತಮ ಮಾರುಕಟ್ಟೆಗೆ ಸೇರಿಸುವುದು ನಮ್ಮ ಕರ್ತವ್ಯ. ಅಷ್ಟೇ ಅಲ್ಲದೆ, ಇಲ್ಲಿನ ರಸ್ತೆಗಳನ್ನು ಉತ್ತಮವಾಗಿ ಮಾಡಿ, ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವುದು ನಮ್ಮ ಮೊದಲ ಆದ್ಯತೆ ಎಂದು ಪ್ರಧಾನಿ ಪುನರುಚ್ಚರಿಸಿದ್ದಾರೆ. ಪುದುಚೇರಿಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಈ ಭರವಸೆ ನೀಡಿದ್ದಾರೆ.

ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ, "ಇಲ್ಲಿನ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನ ನೀಡುತ್ತೇವೆ. ಅಷ್ಟೇ ಅಲ್ಲದೆ, ಚತುಷ್ಪಥ ರಸ್ತೆಗಳ ನಿರ್ಮಾಣ ಕಾರ್ವನ್ನು ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದರು.

ಇನ್ನು ಮುಂಬರುವ ವರ್ಷಗಳಲ್ಲಿ ಪ್ರಮುಖ ಪಾತ್ರ ವಹಿಸುವ ಒಂದು ಕ್ಷೇತ್ರ ಎಂದರೆ ಅದು ಆರೋಗ್ಯ ರಕ್ಷಣೆ. ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವ ರಾಷ್ಟ್ರಗಳು ಬೆಳಗುತ್ತವೆ. ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಮ್ಮ ಉದ್ದೇಶಕ್ಕೆ ಅನುಗುಣವಾಗಿ ಬ್ಲಡ್​​ ಕೇಂದ್ರವನ್ನು ನಾವು ಪ್ರಾರಂಭಿಸುತ್ತೇವೆ ಎಂದು ಅಭಯ ನೀಡಿದರು.

2016 ರಲ್ಲಿ ಪುದುಚೇರಿಗೆ ಜನರ ಸರ್ಕಾರ ಸಿಗಲಿಲ್ಲ. ದೆಹಲಿಯಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್ ಸೇವೆ ಸಲ್ಲಿಸುವಲ್ಲಿ ನಿರತರಾಗಿದ್ದವರ ಸರ್ಕಾರವನ್ನು ಪಡೆದರು. ಅವರ ಆದ್ಯತೆಗಳು ವಿಭಿನ್ನವಾಗಿವೆ. ನಿಮ್ಮ ಮಾಜಿ ಸಿಎಂ ತಮ್ಮ ಪಕ್ಷದ ಉನ್ನತ ನಾಯಕರ ಚಪ್ಪಲಿಗಳನ್ನು ಎತ್ತುವಲ್ಲಿ ಪರಿಣತರಾಗಿದ್ದರು. ಆದರೆ, ಮುಂದಿನ ಸರ್ಕಾರ ಜನಶಕ್ತಿ ಹೊಂದಿರುವ ಸರ್ಕಾರವಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಇಡೀ ರಾಷ್ಟ್ರವು ಅಸಹಾಯಕ ಮಹಿಳೆಯೊಬ್ಬರು ಚಂಡಮಾರುತ ಮತ್ತು ಪ್ರವಾಹದ ಸಮಯದಲ್ಲಿ ಪುದುಚೇರಿ ಸರ್ಕಾರ ಮತ್ತು ಸಿಎಂ ನಿರ್ಲಕ್ಷ್ಯದ ಬಗ್ಗೆ ದೂರು ನೀಡುತ್ತಿದ್ದ ವಿಡಿಯೋವನ್ನು ನೋಡಿದೆ. ಅವಳ ಕಣ್ಣುಗಳಲ್ಲಿನ ನೋವು ಮತ್ತು ಧ್ವನಿಯಲ್ಲಿನ ನೋವವನ್ನು ನಾವು ಗುರುತಿಸಬಹುದಂತದ್ದಾಗಿತ್ತು. ಆದರೆ ಮಾಜಿ ಸಿಎಂ ರಾಷ್ಟ್ರಕ್ಕೆ ಸತ್ಯವನ್ನು ಹೇಳುವ ಬದಲು, ತಪ್ಪಾದ ಅನುವಾದವನ್ನು ಮಾಡಿದರು. ಅವರು ಜನರಿಗೆ ಸುಳ್ಳು ಹೇಳಿದರು. ಸುಳ್ಳಿನ ಆಧಾರದ ಮೇಲೆ ಸಂಸ್ಕೃತಿ ಹೊಂದಿರುವ ಪಕ್ಷವು ಎಂದಾದರೂ ಜನರಿಗೆ ಸೇವೆ ಸಲ್ಲಿಸಬಹುದೇ? ಎಂದು ಪ್ರಶ್ನಿಸಿದರು.

ಭಾರತದಾದ್ಯಂತ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಿದ್ದಾರೆ. ಸಂಸತ್ತಿನಲ್ಲಿ ಅವರ ಸ್ಥಾನಗಳು ಅತ್ಯಂತ ಕಡಿಮೆಯಾಗುತ್ತಿವೆ. ಊಳಿಗಮಾನ್ಯ ರಾಜಕಾರಣ, ರಾಜವಂಶದ ರಾಜಕೀಯವಾದ ಕಾಂಗ್ರೆಸ್ ಸಂಸ್ಕೃತಿ ಕೊನೆಗೊಳ್ಳುತ್ತಿದೆ ಎಂದರು.

ABOUT THE AUTHOR

...view details