ಕರ್ನಾಟಕ

karnataka

By

Published : Dec 6, 2021, 2:59 PM IST

Updated : Dec 6, 2021, 3:12 PM IST

ETV Bharat / bharat

BJP ಜೊತೆ ಮೈತ್ರಿಯೊಂದಿಗೆ ಪಂಜಾಬ್​​​ ಚುನಾವಣೆಯಲ್ಲಿ ಸ್ಪರ್ಧೆ.. ಗೆಲ್ಲುವುದೇ ನಮ್ಮ ಗುರಿ ಎಂದ ಅಮರೀಂದರ್​​

ಪಂಜಾಬ್​​ ವಿಧಾನಸಭೆ ಚುನಾವಣೆಗೋಸ್ಕರ ಕ್ಯಾಪ್ಟನ್​ ಅಮರೀಂದರ್ ಸಿಂಗ್ ನೇತೃತ್ವದ ಹೊಸ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದರು.

Amarinder Singh on BJP alliance
Amarinder Singh on BJP alliance

ಚಂಡೀಗಢ(ಪಂಜಾಬ್​​):ಮುಂದಿನ ವರ್ಷ ಪಂಜಾಬ್​​ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​​ ಸಿಂಗ್​​ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದೇ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಪಂಜಾಬ್ ಕಾಂಗ್ರೆಸ್​​ನಲ್ಲಿ ಉಂಟಾಗಿದ್ದ ಬಿಕ್ಕಟ್ಟಿನಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದಿಂದ ಹೊರಬಂದಿರುವ ಕ್ಯಾಪ್ಟನ್​ ಅಮರೀಂದರ್​​ ಸಿಂಗ್​ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪಕ್ಷ 'ಪಂಜಾಬ್​​ ಲೋಕ ಕಾಂಗ್ರೆಸ್'​​​ ಕಣಕ್ಕಿಳಿಯಲಿದ್ದು, ಇದಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂದಿದ್ದಾರೆ. ಆದಷ್ಟು ಬೇಗ ಮೈತ್ರಿ ಘೋಷಣೆಯಾಗಲಿದ್ದು, ಸೀಟು ಹಂಚಿಕೆ ಸಹ ನಡೆಯಲಿದೆ ಎಂದರು.

ಪಂಜಾಬ್​​ ವಿಧಾನಸಭೆ ಚುನಾವಣೆ ಬಗ್ಗೆ ಕ್ಯಾ. ಅಮರೀಂದರ್ ಸಿಂಗ್ ಮಾತು

2022ರ ಪಂಜಾಬ್​​ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದ್ದು, ತದನಂತರ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕೆಲ ದಿನಗಳಲ್ಲಿ ಗೃಹ ಸಚಿವ ಅಮಿತ್​ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಮಾತುಕತೆ ನಡೆಸುವ ಸುಳಿವು ನೀಡಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಈಗಾಗಲೇ ಅಮರೀಂದರ್​ ಸಿಂಗ್​​​ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​​​ ಶಾ ಜೊತೆ ಮಾತನಾಡಿದ್ದಾರೆ. ಇದೀಗ ಅಂತಿಮ ಹಂತದ ನಿರ್ಣಯಕ್ಕಾಗಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ಪಂಜಾಬ್​ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಹಾಗೂ ಶಿರೋಮಣಿ ಅಕಾಲಿ ದಳದ ಮಾಜಿ ಮುಖಂಡ ಸುಖ್ ದೇವ್ ಸಿಂಗ್ ದಿಂಡ್ಸಾ ಅವರೊಂದಿಗೂ ಮಾತಕತೆ ನಡೆದಿದೆ. ಇದೀಗ ಪಂಜಾಬ್​​​ ಲೋಕ ಕಾಂಗ್ರೆಸ್​​, ಬಿಜೆಪಿ ಹಾಗೂ ಶಿರೋಮಣಿ ಅಕಾಲಿ ದಳ ಮೈತ್ರಿ ಮಾಡಿಕೊಂಡು ಚುನಾಚಣೆ ಎದುರಿಸುವ ಸಾಧ್ಯತೆ ಇದೆ.

Last Updated : Dec 6, 2021, 3:12 PM IST

ABOUT THE AUTHOR

...view details