ಮೆಹ್ಸಾನ್(ಗುಜರಾತ್): ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿರುವ ಐಪಿಎಲ್ ವೇಳೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಯುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಗುಜರಾತ್ನ ಖತರ್ನಾಕ್ ಗ್ಯಾಂಗ್ವೊಂದು ನಕಲಿ ಐಪಿಎಲ್ ಟೂರ್ನಿ ಆಯೋಜನೆ ಮಾಡಿ, ರಷ್ಯಾ ಬುಕ್ಕಿಗಳಿಗೆ ಮೋಸ ಮಾಡಿದ್ದಾರೆ. ಆರೋಪಿಗಳ ಬಂಧನ ಮಾಡುವಲ್ಲಿ ಗುಜರಾತ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಪಾರದ ಜಗತ್ತಿನಲ್ಲಿ ಇಂತಹ ಪ್ರಕರಣ ಮೊದಲ ಸಲ ನಡೆದಿದ್ದು, ಗುಜರಾತ್ನ ಮೆಹ್ಸಾನ್ನಲ್ಲಿ ನಕಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಂಬಂಧ ನಾಲ್ವರ ಬಂಧನ ಮಾಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಆನ್ಲೈನ್ ಯೂಟ್ಯೂಬ್ನಲ್ಲಿ ಇದರ ಪ್ರಸಾರ ಮಾಡಿ, ಬೆಟ್ಟಿಂಗ್ ದಂಧೆ ನಡೆಸಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ?:ಗುಜರಾತ್ನ ಗದ್ದೆಯಲ್ಲಿ ಸ್ಥಳೀಯರೊಂದಿಗೆ ತಂಡ ರಚನೆ ಮಾಡಿ ಪಂದ್ಯ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ನಕಲಿ ಕಾಮೆಂಟರಿ ಹಾಗೂ ಪ್ರೇಕ್ಷಕರ ಘೋಷಣೆಯ ಧ್ವನಿ ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನ ಯೂಟ್ಯೂಬ್ನಲ್ಲಿ ಲೈವ್ ಪ್ರಸಾರ ಮಾಡಲಾಗಿದೆ. ಇದನ್ನ ನಂಬಿರುವ ರಷ್ಯಾ ಟೆಕ್ಕಿಗಳು ಆನ್ಲೈನ್ ಮೂಲಕ ಬೆಟ್ಟಿಂಗ್ ಆಡಲು ಶುರು ಮಾಡಿದ್ದಾರೆ. ಆದರೆ, ಪೊಲೀಸರು ದಾಳಿ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.