ಅಮ್ರೋಹಾ, ಉತ್ತರಪ್ರದೇಶ:ಸರ್ಕಾರಿ ಸೌಲಭ್ಯ ಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು ಅನ್ನೋದ ಸರ್ಕಾರಗಳ ಆದೇಶ. ಗುರುತಿನ ಚೀಟಿಯಾದ ಆಧಾರ್ ಅನ್ನು ತಪಾಸಣಾ ಕೇಂದ್ರಗಳಲ್ಲಿಯೂ ಕೇಳುತ್ತಾರೆ. ಚುನಾವಣೆಗಳಲ್ಲಿ ವೋಟ್ ಹಾಕೋ ವೇಳೆಯೂ ಆಧಾರ್ ಕಾರ್ಡ್ ಕೇಳ್ತಾರೆ. ವಿಚಿತ್ರ ಅಂದರೆ ಉತ್ತರಪ್ರದೇಶದಲ್ಲಿ ಮದುವೆ ಊಟ ಮಾಡಲೂ ಆಧಾರ್ ಕಾರ್ಡ್ ಕೇಳಿದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಇಬ್ಬರು ಸಹೋದರಿಯರ ಮದುವೆ ಶುಭಕಾರ್ಯ ನಡೆದಿದೆ. ಈ ವೇಳೆ ಮದುವೆಗೆ ಬಂದ ಅತಿಥಿಗಳು ಊಟಕ್ಕೆಂದು ಹೋದಾಗ ಅಲ್ಲಿದ್ದ ವ್ಯಕ್ತಿಯೊಬ್ಬ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾನೆ.
ಇದರಿಂದ ಗಲಿಬಿಲಿಯಾದ ಅತಿಥಿಗಳು ಯಾಕೆಂದು ವಿಚಾರಿಸಿದಾಗ ಬೇರೆ ಊರಿನವರು, ಸಂಬಂಧಿಕರಲ್ಲದವರೂ ಊಟಕ್ಕೆ ಬರುತ್ತಾರೆ. ಹಾಗಾಗಿ ನೀವು ಗಂಡು ಅಥವಾ ಹೆಣ್ಣಿನ ಕಡೆಯವರು ಎಂಬುದನ್ನು ಸಾಬೀತು ಮಾಡಲು ಆಧಾರ್ ಕಾರ್ಡ್ ತೋರಿಸಿ. ಅಲ್ಲದೇ ಯಾವ ಊರಿನವರು ಎಂಬುದು ಗೊತ್ತಾಗುತ್ತದೆ ಎಂದು ಅಲ್ಲಿದ್ದವರು ಹೇಳಿದ್ದಾರೆ.