ಕರ್ನಾಲ್ (ಹರಿಯಾಣ): ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚಾಗಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಬಳಸುವ ಕೀಟನಾಶಕಗಳೇ ಇದರ ಹಿಂದಿನ ಪ್ರಮುಖ ಕಾರಣವೆಂದು ಬಿಡಿಸಿ ಹೇಳಬೇಕಿಲ್ಲ.
ಕೀಟಗಳನ್ನು ತೊಡೆದುಹಾಕಲು ರೈತರು ಕೀಟನಾಶಕಗಳನ್ನು ಬಳಸುತ್ತಾರೆ. ಇದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹರಿಯಾಣದ ಕರ್ನಾಲ್ ಜಿಲ್ಲೆಯ ನಾಸಿರ್ಪುರ ಗ್ರಾಮದ ರೈತ ಜಗತ್ರಾಮ್ ಕೂಡ ಇದೇ ರೀತಿಯ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಅದರಿಂದಾಗಿ ಅವರು ವಿಷಮುಕ್ತ ಕೃಷಿ ಮಾಡಲು ನಿರ್ಧರಿಸಿದರು. 13 ವರ್ಷಗಳ ಹಿಂದೆ ಅವರು ಆರಂಭಿಸಿದ ಕೃಷಿ ಇಂದು ಇತರರಿಗೆ ಸ್ಫೂರ್ತಿಯಾಗಿದೆ.
ಶೂನ್ಯ ಬಂಡವಾಳ ಕೃಷಿಯ ಬಗ್ಗೆ ತಿಳಿದುಕೊಳ್ಳಲು ನೂರಾರು ರೈತರು ಜತ್ರಾಮ್ ಅವರ ಹೊಲಕ್ಕೆ ಭೇಟಿ ನೀಡುತ್ತಾರೆ. ಅವರು ಶೂನ್ಯ ಬಜೆಟ್ ಕೃಷಿ ಮತ್ತು ಸಾವಯವ ಕೃಷಿಯ ತಂತ್ರಗಳನ್ನು ಇತರ ರೈತರಿಗೆ ಸಹ ಕಲಿಸುತ್ತಿದ್ದಾರೆ. ಇದರಿಂದ ರೈತರು ಶುದ್ಧ ಸಾವಯವ ಉತ್ಪನ್ನಗಳನ್ನು ತಯಾರಿಸಬಹುದು. ಅಲ್ಲದೇ ವಿಷಪೂರಿತ ಆಹಾರವನ್ನು ತಟ್ಟೆಯಿಂದ ತೆಗೆದು ಹಾಕಲು ಸಹಕಾರಿಯಾಗಿದೆ.