ಬಿಲಾಸ್ಪುರ(ಛತ್ತೀಸ್ಗಢ): ಹೋಮಿಯೋಪಥಿ ವೈದ್ಯ ನೀಡಿದ ಔಷಧಿ ಸೇವಿಸಿದ ಒಂದೇ ಗ್ರಾಮದ 9 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೈದ್ಯನೊಬ್ಬನನ್ನು ಬಂಧಿಸಲಾಗಿದೆ.
ಘಟನೆಯ ವಿವರ
ಛತ್ತೀಸ್‌ಗಢದಲ್ಲಿ ಲಾಕ್ಡೌನ್ ಜಾರಿಗೊಳಿಸಿರುವ ಕಾರಣ ಮದ್ಯ ಸಿಗುತ್ತಿಲ್ಲ. ಬಿಲಾಸ್ಪುರದ ಸಿರ್ಗಿಟ್ಟಿ ಗ್ರಾಮದಲ್ಲಿ ಯುವಕನೊಬ್ಬ ಹೋಮಿಯೋಪಥಿ ವೈದ್ಯರ ಬಳಿ ಕೆಮ್ಮು ಮತ್ತು ನೆಗಡಿಗೆ ‘ಡ್ರೋಸೆರಾ 30’ ಔಷಧಿ ಪಡೆದಿದ್ದಾನೆ. ಈ ಔಷಧಿಯಲ್ಲಿ ಶೇ.91ರಷ್ಟು ಆಲ್ಕೋಹಾಲ್ ಇರುತ್ತೆ. ಇದನ್ನರಿತ ಯುವಕ ನೀರಿನಲ್ಲಿ ಬೆರೆಸಿ ಕುಡಿದಿದ್ದಾನೆ. ಇದನ್ನರಿತ ಕೆಲವರು ಯುವಕನ ಹಾದಿಯನ್ನೇ ಹಿಡಿದಿದ್ದಾರೆ. ಅದು ಓವರ್ ಡೋಸ್ ಆಗಿದೆ. ಹೀಗಾಗಿ ಗ್ರಾಮದ 9 ಜನರು ಮೃತಪಟ್ಟಿದ್ದು, ನಾಲ್ವರು ಸ್ಥಿತಿ ಚಿಂತಾಜನಕವಾಗಿದೆ.