ನವದೆಹಲಿ:ಈ ಬಾರಿಯಸಂಸತ್ ಅಧಿವೇಶನದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲು ಪ್ರತಿಪಕ್ಷಗಳೇ ಕಾರಣ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಆರೋಪಿಸಿದ್ದಾರೆ.
'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಸೂದೆಗಳ ಅಂಗೀಕಾರದ ಬಗ್ಗೆ ಮಾತನಾಡಿದ ಅವರು, ಅಂಗೀಕಾರಗೊಳ್ಳುತ್ತಿರುವ ಬಿಲ್ಗಳ ಬಗ್ಗೆ ಪ್ರತಿಪಕ್ಷಗಳಿಗೆ ಆತಂಕವಿದ್ದರೆ ಅವರು, ಸದನದಲ್ಲಿ ಕುಳಿತು ಅವುಗಳ ಬಗ್ಗೆ ಚರ್ಚೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.