ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ - ಡಿಎಂಕೆ ಶಾಸಕರೊಂದಿಗೆ ನಿರಂತರ ಸಂಪರ್ಕ: ಪುದುಚೆರಿ ಸಿಎಂ ಸ್ಪಷ್ಟನೆ - ಪುದುಚೆರಿ ಸಿಎಂ ವಿ. ನಾರಾಯಣಸಾಮಿ ಸುದ್ದಿ

ಫೆಬ್ರವರಿ 22 ರಂದು ನಡೆಯಲಿರುವ ವಿಶ್ವಾಸಮತ ಸಾಬೀತಿನ ಮಧ್ಯೆ ಪುದುಚೆರಿ ಸಿಎಂ ವಿ. ನಾರಾಯಣಸಾಮಿ ಅವರು ಕಾಂಗ್ರೆಸ್ ಮತ್ತು ಡಿಎಂಕೆ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.

Puducherry CM
ಪುದುಚೆರಿ ಸಿಎಂ ವಿ. ನಾರಾಯಣಸಾಮಿ

By

Published : Feb 19, 2021, 12:31 PM IST

ಪುದುಚೆರಿ:ಪುದುಚೆರಿಯಲ್ಲಿ ರಾಜಕೀಯ ಬಿಕ್ಕಟ್ಟು ಮತ್ತು ಫೆಬ್ರವರಿ 22 ರಂದು ನಡೆಯಲಿರುವ ವಿಶ್ವಾಸ ಮತ ಸಾಬೀತಿನ ಮಧ್ಯೆ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರು ಕಾಂಗ್ರೆಸ್ ಮತ್ತು ಡಿಎಂಕೆ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಪ್ರತಿಪಕ್ಷಗಳು ಕೇವಲ 11 ಶಾಸಕರನ್ನು ಮಾತ್ರ ಹೊಂದಿವೆ. ಅದರಲ್ಲಿ ಮೂವರು ಮತದಾನದ ಹಕ್ಕು ಇಲ್ಲದ ಶಾಸಕರಾಗಿ ನಾಮನಿರ್ದೇಶನಗೊಂಡಿದ್ದಾರೆ ಎಂದು ಹೇಳಿದರು.

"ಲೆಫ್ಟಿನೆಂಟ್ ಗವರ್ನರ್ ಬಹುಮತ ಸಾಬೀತುಪಡಿಸಲು ಕರೆದಾಗ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ನಾನು ಕಾಂಗ್ರೆಸ್ ಮತ್ತು ಡಿಎಂಕೆ ಶಾಸಕರೊಂದಿಗೆ ಚರ್ಚಿಸುತ್ತಿದ್ದೇನೆ. ಈಗ 21ರಂದು ನಾವು ಮತ್ತೆ ಭೇಟಿಯಾಗಲಿದ್ದೇವೆ. ನಂತರ ನಾವು ನಮ್ಮ ಕಾರ್ಯತಂತ್ರವನ್ನು ನಿರ್ಧರಿಸುತ್ತೇವೆ "ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಪುದುಚೆರಿಯಲ್ಲಿ ರಾಜಕೀಯ ಜಂಜಾಟ ತೀವ್ರಗೊಳ್ಳುತ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರ್​ರಾಜನ್​ ಅವರು ಫೆ. 22ರಂದು ವಿಶ್ವಾಸ ಮತ ಸಾಬೀತು ಪಡಿಸುವಂತೆ ಆದೇಶಿಸಿದ್ದರು.

ABOUT THE AUTHOR

...view details