ಲೂಧಿಯಾನ: ಪಂಜಾಬ್ ಕ್ಯಾಬಿನೆಟ್ ಮಾಜಿ ಸಚಿವ ಸಾಧು ಸಿಂಗ್ ಧರಂಸೋತ್ರನ್ನು ಅರಣ್ಯ ಇಲಾಖೆಯಲ್ಲಿನ ಹಗರಣದ ಆರೋಪದ ಮೇಲೆ ವಿಜಿಲೆನ್ಸ್ ಈ ಹಿಂದೆ ಬಂಧಿಸಿತ್ತು. ಈ ಬಂಧನದ ಹಿಂದೆ ಹಲವಾರು ಪ್ರಶ್ನೆಗಳು ಮೂಡಿದ್ದು, ಪಂಜಾಬ್ ಲೋಕ ಕಾಂಗ್ರೆಸ್, ಆಮ್ ಆದ್ಮಿ ಪಕ್ಷವು ತೆಗೆದುಕೊಂಡ ಕ್ರಮದ ಬಗ್ಗೆ ಅನುಮಾನವಿದೆ ಎಂದು ಅಕಾಲಿದಳ ಆರೋಪಿಸಿದೆ.
ಮಾಜಿ ಸಚಿವ ಬಂಧನ: ಸಾಧು ಸಿಂಗ್ ಧರಂಸೋತ್ ಮೇಲಿನ ಭ್ರಷ್ಟಾಚಾರ ಆರೋಪ ಹೊಸದಲ್ಲ. ಅವರು ಸಚಿವರಾಗಿದ್ದಾಗಲೂ ಸ್ಟೈಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆದರೆ, ವಿಜಿಲೆನ್ಸ್ ಅವರ ವಿರುದ್ಧ ಕ್ರಮ ಕೈಗೊಂಡಿರುವುದು ಸ್ಟೈಫಂಡ್ ಹಗರಣ ಪ್ರಕರಣಗಳಲ್ಲಿ ಅಲ್ಲ, ಅರಣ್ಯ ಇಲಾಖೆಗಳಲ್ಲಿ ಮಾಡಿದ ಲೋಪಗಳಿಗಾಗಿ.
ಮಾಜಿ ಸಚಿವ ಬಂಧನ ಕುರಿತು ಪಂಜಾಬ್ ಸರ್ಕಾರಕ್ಕೆ ವಿರೋಧ ಪಕ್ಷಗಳ ಪ್ರಶ್ನೆ ವಿರೋಧ ಪಕ್ಷದ ಲೆಕ್ಕಚಾರವೇನು?: ಆಮ್ ಆದ್ಮಿ ಪಕ್ಷವು ಆಯ್ಕೆ ಮಾಡಿಕೊಂಡಿರುವ ಕ್ರಮವನ್ನು ನೋಡಿದ್ರೆ ಸಂಗ್ರೂರ್ ಮತಗಟ್ಟೆಯಲ್ಲಿ ಪಕ್ಷಕ್ಕೆ ಆದ ಅವಮಾನವನ್ನು ತಪ್ಪಿಸಲು ಮತ್ತು ಗಮನ ಬೇರೆಡೆ ಸೆಳೆಯಲು ಇದೆಲ್ಲವನ್ನೂ ಮಾಡುತ್ತಿದೆ ಎಂದು ತೋರುತ್ತದೆ ಅಂತಾ ಕಾಂಗ್ರೆಸ್ ಮತ್ತು ಪಂಜಾಬ್ ಪೀಪಲ್ಸ್ ಕಾಂಗ್ರೆಸ್ ಹೇಳಿದೆ. ಸಿದ್ದು ಮೂಸೆವಾಲಾ ಹತ್ಯೆ ಬಳಿಕ ಆಮ್ ಆದ್ಮಿ ಪಕ್ಷದ ಗ್ರಾಫ್ ಕುಸಿದಿದೆ. ಈಗಿನ ಸರ್ಕಾರದ ವಿರುದ್ಧ ಜನರ ನಂಬಿಕೆ ಕುಸಿದಿದೆ ಎಂಬುದು ವಿರೋಧ ಪಕ್ಷದ ಲೆಕ್ಕಾಚಾರಗಳಾಗಿವೆ.
ಓದಿ:ಗಾಯಕ ಸಿಧು ಮೂಸೆವಾಲಾ ಕೊಲೆ ಹಿಂದಿನ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯಿ?
ಮಾಜಿ ಸಚಿವರಿಗೆ ಕ್ರಮದ ಬಗ್ಗೆ ಭಯ?: ಆಮ್ ಆದ್ಮಿ ಪಕ್ಷ ಸಾಧು ಸಿಂಗ್ ಧರಂಸೋತ್ ಮೇಲೆ ಕೈಗೊಂಡಿರುವ ಕ್ರಮಕ್ಕೂ ಮೊದಲು ಪಂಜಾಬ್ನ ಇಬ್ಬರು ಮಾಜಿ ಸಚಿವರು ಬಿಜೆಪಿ ಸೇರಿದ್ದರು. ಈಗಿನ ಸರ್ಕಾರದ ಕ್ರಮದ ಭಯ ಬಗ್ಗೆ ಮಾಜಿ ಸಚಿವರಲ್ಲಿ ಭಯ ಮೂಡುತ್ತಿದೆ. ಹೀಗಾಗಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ದಾರಿ ಹಿಡಿಯುತ್ತಿದ್ದಾರೆ ಎಂದು ರಾಜಕೀಯ ಪಂಡಿತರು ಊಹೆ ಮಾಡುತ್ತಿದ್ದಾರೆ.
ಕ್ಯಾಪ್ಟನ್ ಅಮರಿಂದರ್ ಕಡತದ ರಹಸ್ಯವೇನು?: ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ದೂರವಿಟ್ಟ ಬಳಿಕ ಕ್ಯಾಪ್ಟನ್ ಜಹಾನ್ ಅವರು ಹಲವು ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ತೊರೆಯಲು ಬಯಸುತ್ತಿದ್ದಾರೆ ಎಂಬ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇತ್ತ ಸುನೀಲ್ ಜಾಖರ್ ಬಿಜೆಪಿ ಸೇರಿದ ನಂತರ ಕಾಂಗ್ರೆಸ್ನಲ್ಲಿ ರಾಜಕೀಯ ಮೇಲಾಟ ಶುರುವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ಸಿಗರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಾಜಕೀಯ ಸೇಡಿನ ಕ್ರಮವೇ?: ಸಾಧು ಸಿಂಗ್ ಧರಂಸೋತ್ ವಿರುದ್ಧ ತೆಗೆದುಕೊಂಡ ಕ್ರಮ ರಾಜಕೀಯ ಸೇಡಿನ ಕ್ರಮವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ವಿರೋಧ ಪಕ್ಷಗಳು ಬೆಂಬಲಿಸಿವೆ. ಈ ಕ್ರಮವು ಪ್ರತೀಕಾರದ ಫಲಿತಾಂಶವಾಗಿದೆ ಎಂದು ತೋರುತ್ತದೆ. ಈ ಬಗ್ಗೆ ಸ್ಪೀಕರ್ನ್ನು ಕೇಳಿದಾಗ, ಆಮ್ ಆದ್ಮಿ ಪಕ್ಷದ ಸರ್ಕಾರ ತನ್ನ ಮಂತ್ರಿಗಳನ್ನೇ ಕ್ಷಮಿಸುತ್ತಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ಮಾಜಿ ಮಂತ್ರಿಗಳು ಹೇಗೆ ಕ್ಷಮಿಸುತ್ತಾರೆ. ಅದಕ್ಕಾಗಿಯೇ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.