ನವದೆಹಲಿ: ಮಾನ್ಸೂನ್ ಅಧಿವೇಶನದಲ್ಲಿ ಪೆಗಾಸಸ್ ಬೇಹುಗಾರಿಕೆ ಪ್ರಕರಣ ಸದ್ದು ಮಾಡಿತ್ತಿದೆ. ಸದನ ಆರಂಭಗೊಂಡ ದಿನದಿಂದಲೂ ಪೆಗಾಸಸ್ ಪ್ರಕರಣದಿಂದಲೇ ಅಧಿವೇಶನ ಗಲಾಟೆ ಗದ್ದಲದಿಂದ ಮುಂದೂಡಲ್ಪಡುತ್ತಿದೆ. ಜೊತೆಗೆ ಆಡಳಿತ ಪಕ್ಷ ವಿಪಕ್ಷಗಳ ಆರೋಪಗಳಿಗೆ ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಪ್ರತಿಪಕ್ಷಗಳು ಮತ್ತೆ ಸದನದಲ್ಲಿ ಕೋಲಾಹಲ ಸೃಷ್ಟಿಸುವ ಸೂಚನೆ ಸಿಕ್ಕಿದೆ.
ಈ ಬಗ್ಗೆ ನಿನ್ನೆ ಸಂಜೆ ಸಭೆ ನಡೆಸಿರುವ ಸದಸ್ಯರ ಇಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿವೆ. ಇಂದು ಸದನದಲ್ಲಿ ಪೆಗಾಸಸ್ ಕುರಿತು ತನಿಖೆಗೆ ಆದೇಶಿಸಿ ನಿಲುವಳಿ ಸೂಚನೆಗೆ ಮುಂದಾಗಲಿದ್ದೇವೆ ಎಂದು ಕೆಳಮನೆ ಕಾಂಗ್ರೆಸ್ ವಿಪ್ ಕೆ.ಸುರೇಶ್ ತಿಳಿಸಿದ್ದಾರೆ.