ನವದೆಹಲಿ:ಸುಡಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೂರಾರು ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರವು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿದೆ. ಸೂಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಕಾವೇರಿ ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ. ಅವರ ದಾರಿಯಲ್ಲಿ ಇನ್ನಷ್ಟು ನಮ್ಮ ಹಡಗುಗಳು ಮತ್ತು ವಿಮಾನಗಳು ಅವರನ್ನು ಮರಳಿ ಮನೆಗೆ ಕರೆತರಲು ಸಿದ್ಧವಾಗಿವೆ. ಸುಡಾನ್‌ನಲ್ಲಿರುವ ನಮ್ಮ ಎಲ್ಲಾ ಸಹೋದರರಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.
ಭಾರತ ಸರ್ಕಾರವು ಈಗಾಗಲೇ ಎರಡು C-130J ಮಿಲಿಟರಿ ವಿಮಾನಗಳನ್ನು ಜೆಡ್ಡಾದಲ್ಲಿ ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ. ಭಾರತೀಯ ನೌಕಾಪಡೆಯ ಹಡಗು ಈ ಪ್ರದೇಶದ ಪ್ರಮುಖ ಬಂದರನ್ನು ತಲುಪಿದೆ.
ಈಜಿಪ್ಟ್ ಮತ್ತು ಯುಎಸ್ ಮತ್ತು ಇತರರೊಂದಿಗೆ ನಿಯಮಿತ ಸಂಪರ್ಕ:ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿಯು ಅಸ್ಥಿರವಾಗಿದೆ. ರಾಜಧಾನಿ ಖಾರ್ಟೂಮ್‌ನ ವಿವಿಧ ಸ್ಥಳಗಳಿಂದ ಉಗ್ರ ಹೋರಾಟದ ವರದಿಗಳು ಬರುತ್ತಿವೆ. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು MEA ಭರವಸೆ ನೀಡಿದೆ. ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸುಡಾನ್ ಅಧಿಕಾರಿಗಳು, ಯುಎನ್, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ಮತ್ತು ಯುಎಸ್ ಮತ್ತು ಇತರರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ.
ಇದನ್ನೂ ಓದಿ:ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಒಡಿಶಾ ಭೇಟಿ: ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಟ