ಕರ್ನಾಟಕ

karnataka

By

Published : May 21, 2022, 4:03 PM IST

ETV Bharat / bharat

ಅಕ್ರಮ ಹಣ ಗಳಿಕೆ ಕೇಸಲ್ಲಿ ಒಪಿ ಚೌಟಾಲಾ ದೋಷಿ.. ಮತ್ತೆ ಜೈಲಿಗೆ ಹರಿಯಾಣ ಮಾಜಿ ಸಿಎಂ?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌಟಾಲಾ ಅವರನ್ನು ದೆಹಲಿ ಕೋರ್ಟ್​ ದೋಷಿ ಎಂದು ಘೋಷಿಸಿದೆ.

op-chautala-convicted
ಅಕ್ರಮ ಹಣ ಗಳಿಕೆ ಕೇಸಲ್ಲಿ ಒಪಿ ಚೌಟಾಲಾ ದೋಷಿ

ಚಂಡೀಗಢ:ಶಿಕ್ಷಕರ ನೇಮಕಾತಿ ಹಗರಣದಲ್ಲಿ ದೋಷಿಯಾಗಿ 10 ವರ್ಷ ಜೈಲಿಗೆ ಶಿಕ್ಷಗೆ ಒಳಗಾಗಿ ಬಿಡುಗಡೆಯಾಗಿದ್ದ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್​ ಚೌಟಾಲಾ, ಇದೀಗ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದು, ಮೇ 26 ರಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಘೋಷಿಸಲಿದೆ.

ಹರಿಯಾಣದ ಮಾಜಿ ಮುಖ್ಯಮಂತ್ರಿಯಾಗಿರುವ ಓಂ ಪ್ರಕಾಶ್ ಚೌಟಾಲಾ ಅವರ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಎರಡು ದಿನಗಳಿಂದ ವಿಚಾರಣೆ ನಡೆಸಿತ್ತು. ಎರಡೂ ಕಡೆಯ ವಾದ - ಪ್ರತಿವಾದಗಳನ್ನು ಆಲಿಸಿದ ಕೋರ್ಟ್​ ಒಪಿ ಚೌಟಾಲಾ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದೆ. ಮೇ 26 ರಂದು ಶಿಕ್ಷೆಯನ್ನು ಪ್ರಕಟಿಸಲಿದೆ.

ಓದಿ:ಕುರ್ಲಾ ಆಸ್ತಿಗಾಗಿ 'ಡಿ ಕಂಪನಿ' ಜೊತೆ ಸೇರಿ ನವಾಬ್ ಮಲಿಕ್ ಸಂಚಿಗೆ ಸಾಕ್ಷ್ಯ ಇದೆ : ವಿಶೇಷ ನ್ಯಾಯಾಲಯ

ABOUT THE AUTHOR

...view details