ನವದೆಹಲಿ: ನಾರಿ ಶಕ್ತಿಗೆ ಉತ್ತೇಜನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ 2024 ರಂದು ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಾರ್ಚ್ ಪಾಸ್ಟ್‌ಗಳು, ಟ್ಯಾಬ್‌ಲಾಕ್ಸ್ ಮತ್ತು ಇತರ ಪ್ರದರ್ಶನಗಳಲ್ಲಿ ಮಹಿಳೆಯರು ಮಾತ್ರ ಭಾಗವಹಿಸುತ್ತಾರೆ ಎಂದು ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಸಶಸ್ತ್ರ ಪಡೆಗಳು ಮತ್ತು ಪರೇಡ್‌ಗೆ ಸಂಬಂಧಿಸಿದ ಇತರ ಸರ್ಕಾರಿ ಇಲಾಖೆಗಳಿಗೆ ಪತ್ರ ಬರೆದಿದೆ. ಮೆರವಣಿಗೆಯ ತುಕಡಿಗಳು, ಕವಾಯತು ತಂಡಗಳು ಮತ್ತು ಟ್ಯಾಬ್‌ಲಾಕ್ಸ್‌ನೊಂದಿಗೆ ಬರುವ ಮಿಲಿಟರಿ ಬ್ಯಾಂಡ್‌ಗಳು ಮತ್ತು ಟ್ಯಾಬ್‌ಲಾಕ್ಸ್‌ಗಳು ಮಹಿಳಾ ಸಿಬ್ಬಂದಿಯನ್ನು ಮಾತ್ರ ಹೊಂದಿರುತ್ತದೆ ಎಂದು ಹೇಳಿದೆ.
ಈ ಪತ್ರವು ಹಲವಾರು ಹಿರಿಯ ಮಿಲಿಟರಿ ಅಧಿಕಾರಿಗಳಿಗೆ ಆಶ್ಚರ್ಯ ಹಾಗೂ ಗೊಂದಲ ಸೃಷ್ಟಿಸಿದೆ. ಇದಕ್ಕಾಗಿ ಸಾಕಷ್ಟು ಮಹಿಳೆಯರು ಪಡೆಗಳಲ್ಲಿ ಲಭ್ಯವಿಲ್ಲ ಎಂದು ಹಲವರು ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿ ಏನೆಂದರೆ, ಕೆಲವು ಮೆರವಣಿಗೆಯ ತುಕಡಿಗಳು ಪುರುಷರನ್ನು ಮಾತ್ರ ಒಳಗೊಂಡಿವೆ. ಮುಖ್ಯವಾಗಿ ಇತ್ತೀಚೆಗೆ ಸಶಸ್ತ್ರ ಪಡೆಗಳು ಮಹಿಳೆಯರನ್ನು ಕಮಾಂಡ್ ಹುದ್ದೆಗೆ ನಿಯೋಜಿಸುವುದು, ಭವಿಷ್ಯದ ನಾಯಕತ್ವಕ್ಕೆ ಆಯ್ಕೆ ಮತ್ತು ಫಿರಂಗಿ ರೆಜಿಮೆಂಟ್‌ಗಳಿಗೆ ಸೇರಲು ಅವಕಾಶ ನೀಡುವುದು, ಲಿಂಗ ಸಮಾನತೆಯನ್ನು ಉತ್ತೇಜಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿವೆ.
ಫೆ.7ರಂದು ನಡೆದ ಸಭೆಯಲ್ಲಿ ಪರೇಡ್‌ನಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೇನೆ, ನೌಕಾಪಡೆ, ವಾಯುಪಡೆ, ಗೃಹ ಸಚಿವಾಲಯದ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆ ನಡೆದು ಸುಮಾರು ಒಂದು ತಿಂಗಳ ನಂತರ ರಕ್ಷಣಾ ಸಚಿವಾಲಯ ಮಾರ್ಚ್ 1 ರಂದು ಭಾಗವಹಿಸುವ ಪಡೆಗಳು, ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಔಪಚಾರಿಕವಾಗಿ ಪತ್ರವನ್ನು ಕಳುಹಿಸಿದೆ.
ನಾರಿ ಶಕ್ತಿಗೆ ಉತ್ತೇಜನ: ಪತ್ರದಲ್ಲಿ "ಮುಂದಿನ ವರ್ಷ ನಡೆಯಲಿರುವ ಪರೇಡ್‌ನಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಒತ್ತು ನೀಡಲಾಗಿದೆ. ವಿವರವಾದ ಚರ್ಚೆಯ ನಂತರ, ಕರ್ತವ್ಯ ಪಥದಲ್ಲಿ ಮೆರವಣಿಗೆಯ ಸಮಯದಲ್ಲಿ ಮಾರ್ಚಿಂಗ್ ಮತ್ತು ಬ್ಯಾಂಡ್‌ಗಳು, ಟ್ಯಾಬ್‌ಲಾಕ್ಸ್ ಮತ್ತು ಇತರ ಪ್ರದರ್ಶನಗಳಲ್ಲಿ ಮಹಿಳೆಯರು ಮಾತ್ರ ಭಾಗವಹಿಸಬೇಕೆಂದು ನಿರ್ಧರಿಸಲಾಗಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಭಾಗವಹಿಸುವ ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳು ಅದಕ್ಕಾಗಿ ಸಿದ್ಧತೆಗಳನ್ನು ಪ್ರಾರಂಭಿಸಲು ಮತ್ತು ಕಾಲಕಾಲಕ್ಕೆ ರಕ್ಷಣಾ ಸಚಿವಾಲಯದೊಂದಿಗೆ ಸಾಧಿಸಿದ ಪ್ರಗತಿಯನ್ನು ಹಂಚಿಕೊಳ್ಳಲು ಕೇಳಿಕೊಳ್ಳಲಾಗಿದೆ.
ಸರ್ಕಾರ ಪ್ರಾಯೋಗಿಕವಾಗಿ ಏನು ಮಾಡುತ್ತದೆ ಎಂದು ಕೆಲವು ಹಿರಿಯ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ಎಲ್ಲಾ ರೇಡ್‌ನ ಎಲ್ಲಾ ಚಟುವಟಿಕೆಗಳಲ್ಲಿ ಮಹಿಳಾ ಸಿಬ್ಬಂದಿ ಭಾಗವಹಿಸುವಿಕೆ ಮಾತ್ರ ಕಷ್ಟ ಎಂದಿದ್ದಾರೆ. ಗಮನಾರ್ಹವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪದಾತಿ ದಳದ ಕವಾಯತು ತಂಡಗಳು ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಒಳಗೊಂಡಿರುತ್ತವೆ. ಪದಾತಿ ದಳಕ್ಕೆ ಇನ್ನೂ ಮಹಿಳೆಯರನ್ನು ಸೇರಿಸಿಲ್ಲ ಎಂದು ಅಧಿಕಾರಿಗಳು ವಾದಿಸಿದ್ದಾರೆ. ಮೆರವಣಿಗೆಯ ತುಕಡಿಗಳನ್ನು ಮುನ್ನಡೆಸುವ ಅಧಿಕಾರಿಗಳು ಅಧಿಕಾರಿ ಶ್ರೇಣಿಯ (PBOR) ಕೆಳಗಿರುವ ಸಿಬ್ಬಂದಿಯನ್ನು ಒಳಗೊಂಡಿರುತ್ತಾರೆ ಮತ್ತು ಸೇನೆಯು ಪಿಬಿಒಆರ್ ಕೇಡರ್ ಮಹಿಳಾ ಸಿಬ್ಬಂದಿಯನ್ನು ಮಿಲಿಟರಿ ಪೊಲೀಸ್ ಕಾರ್ಪ್ಸ್‌ನಲ್ಲಿ ಮಾತ್ರ ಹೊಂದಿದೆ.