ನವದೆಹಲಿ: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕರಿಸಿದ ಹೆಲ್ಮೆಟ್‌ಗಳನ್ನು ಮಾತ್ರ ಭಾರತದಲ್ಲಿ ತಯಾರಿಸಿ ಮಾರಾಟ ಮಾಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕಡಿಮೆ ಗುಣಮಟ್ಟದ ದ್ವಿಚಕ್ರ ವಾಹನಗಳ ಹೆಲ್ಮೆಟ್‌ಗಳ ಮಾರಾಟವನ್ನು ತಪ್ಪಿಸಲು ಮತ್ತು ಸವಾರರನ್ನು ಮಾರಣಾಂತಿಕ ಗಾಯಗಳಿಂದ ರಕ್ಷಿಸಲು ಇದು ಸಹಕಾರಿಯಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಗಲೇ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್‌ಗಳ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಗುಣಮಟ್ಟ ನಿಯಂತ್ರಣದಡಿ ಈ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ:ಹೆಲ್ಮೆಟ್ಗಳಿಗೆ BIS ಮಾನದಂಡ ಕಡ್ಡಾಯ: ನಿಮ್ಮ ಸಲಹೆ, ಕಮೆಂಟ್ ಕೇಳ್ತಿದೆ ಸಾರಿಗೆ ಸಚಿವಾಲಯ
ರಸ್ತೆ ಸುರಕ್ಷತೆ ಕುರಿತಂತೆ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿ ದೇಶದ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಮತ್ತು ಹಗುರವಾದ ಹೆಲ್ಮೆಟ್‌ಗಳ ಕುರಿತು ಅಧ್ಯಯನ ಮಾಡುವಂತೆ ಸೂಚಿಸಿತ್ತು. ಅದರಂತೆ ಮಾರ್ಚ್ 2018ರಲ್ಲಿ ಸಮಿತಿಯು ತನ್ನ ವರದಿ ನೀಡಿದ್ದು, ದೇಶದಲ್ಲಿ ಹಗುರವಾದ ಹೆಲ್ಮೆಟ್‌ಗಳನ್ನು ತಯಾರಿಸುವಂತೆ ಶಿಫಾರಸು ಮಾಡಿತು ಮತ್ತು ಸಚಿವಾಲಯವು ಸಹ ಈ ವರದಿಯನ್ನು ಒಪ್ಪಿಕೊಂಡಿತ್ತು. ಭಾರತದಲ್ಲಿ ವಾರ್ಷಿಕವಾಗಿ ಸುಮಾರು 1.7 ಕೋಟಿ ದ್ವಿಚಕ್ರ ವಾಹನಗಳನ್ನು ತಯಾರಿಸಲಾಗುತ್ತಿದೆ.