ಕರ್ನಾಟಕ

karnataka

ETV Bharat / bharat

ಬೆಂಗಾಲಿ ಬರುವವರಿಗೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಉದ್ಯೋಗ: ಸಿಎಂ ಮಮತಾ ಬ್ಯಾನರ್ಜಿ ವಿವಾದ - ಬೆಂಗಾಲಿ ಬರುವವರಿಗೆ ಮಾತ್ರ ಬಂಗಾಳದಲ್ಲಿ ಸರ್ಕಾರಿ ಉದ್ಯೋಗ

ಬೆಂಗಾಲಿ ಭಾಷೆ ಬರುವವರಿಗೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಉದ್ಯೋಗ ನೀಡುವುದಾಗಿ ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿರುವುದು ವಿವಾದಕ್ಕೆ ಕಾರಣವಾಗಿದೆ.

Only Bengalis to get jobs in West Bengal controversial statement of Mamata Banerjee
ಬೆಂಗಾಲಿ ಬರುವವರಿಗೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಉದ್ಯೋಗ - ಸಿಎಂ ಮಮತಾ ಬ್ಯಾನರ್ಜಿ ವಿವಾದ

By

Published : Dec 9, 2021, 3:11 PM IST

ಮಾಲ್ಡಾ(ಪಶ್ಚಿಮ ಬಂಗಾಳ): ಬೆಂಗಾಲಿ ಭಾಷೆ ಬರುವವರಿಗೆ ಮಾತ್ರ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ.

2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ತಯಾರಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಆಮಿಷಗಳನ್ನು ಪಕ್ಷಗಳು ನೀಡುತ್ತಿವೆ. ಪಶ್ಚಿಮ ಬಂಗಾಳದ ಸರ್ಕಾರಿ ಉದ್ಯೋಗ ಬೆಂಗಾಲಿ ಭಾಷೆ ಗೊತ್ತಿರುವವರಿಗೆ ಮಾತ್ರ ನೀಡಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಾಲ್ಡಾದಲ್ಲಿ ನಡೆದ ಆಡಳಿತಾತ್ಮಕ ಸಭೆಯೊಂದರಲ್ಲಿ ದೀದಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಬಿಹಾರ, ಉತ್ತರ ಪ್ರದೇಶಗಳೂ ಕೂಡಾ ಸ್ಥಳೀಯರಿಗೆ ಮಾತ್ರ ಉದ್ಯೋಗ ನೀಡಲು ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೆಲವೊಂದು ಸುಧಾರಣೆಗಳನ್ನು ತರಲಾಗುತ್ತಿದೆ. ಈಗ ರಾಜ್ಯದಲ್ಲಿರುವ ಜನತೆಗೆ ಉದ್ಯೋಗವನ್ನು ಒದಗಿಸಬೇಕಾಗುತ್ತದೆ. ಸ್ಥಳೀಯರನ್ನು ಉದ್ಯೋಗದಲ್ಲಿ ನೇಮಿಸಿಕೊಂಡರೆ ಅವರೊಂದಿಗೆ ವ್ಯವಹರಿಸುವುದು ಸುಲಭವಾಗುತ್ತದೆ ದೀದಿ ವಿವರಿಸಿದ್ದಾರೆ.

ಇದನ್ನೂ ಓದಿ:ಶರದ್ ಪವಾರ್ ಭೇಟಿ ಮಾಡಿದ ಮಮತಾ ಬ್ಯಾನರ್ಜಿ: ಅಲಯನ್ಸ್​ ಸಂಬಂಧ ಹೇಳಿದ್ದೇನು?

For All Latest Updates

TAGGED:

ABOUT THE AUTHOR

...view details