ಕರ್ನಾಟಕ

karnataka

ETV Bharat / bharat

ರಮ್ಮಿ ಮುಂತಾದ ಆನ್​ಲೈನ್ ಗೇಮ್​​ಗಳ ಮೇಲಿನ ನಿಷೇಧ ಹಿಂಪಡೆದ ತಮಿಳುನಾಡು

ಆನ್​ಲೈನ್ ಜೂಜಾಟ ನಿಷೇಧಿಸಿದ್ದನ್ನು ಸಮರ್ಥಿಸಿಕೊಂಡಿದ್ದ ತಮಿಳುನಾಡು ಸರ್ಕಾರ, ಈ ಆಟ​ಗಳಿಂದಾಗಿ ಸಾಕಷ್ಟು ಮಂದಿ ಆಸ್ತಿಪಾಸ್ತಿ ಕಳೆದುಕೊಳ್ಳುವುದು ಮಾತ್ರವಲ್ಲದೇ, ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯದಲ್ಲಿ ವಾದಿಸಿತ್ತು.

Online rummy ban lifted in Tamil Nadu!
ರಮ್ಮಿ ಮುಂತಾದ ಆನ್​ಲೈನ್ ಗೇಮ್​​ಗಳ ಮೇಲಿನ ನಿಷೇಧ ಹಿಂಪಡೆದ ತಮಿಳುನಾಡು ಹೈಕೋರ್ಟ್​​​

By

Published : Aug 4, 2021, 6:57 AM IST

ಚೆನ್ನೈ(ತಮಿಳುನಾಡು):ಆನ್​ಲೈನ್​ ಜೂಜಿನ ಗೀಳಿಗೆ ಬಿದ್ದು ಜನರು ಪ್ರಾಣ, ಆಸ್ತಿ-ಪಾಸ್ತಿ ಕಳೆದುಕೊಳ್ಳುವುದನ್ನು ತಡೆಯುವ ಸಲುವಾಗಿ ತಮಿಳುನಾಡು ಸರ್ಕಾರ 2020 ನವೆಂಬರ್ 21ರಲ್ಲಿ ರಮ್ಮಿ ಮತ್ತು ಬ್ರೋಕರ್​ನಂತಹ ಆನ್​​ಲೈನ್ ಗೇಮ್​​​ಗಳನ್ನು ಬ್ಯಾನ್​ ಮಾಡಿ ಕಾನೂನು ಹೊರಡಿಸಿತ್ತು. ಇದೀಗ ಆ ಕಾನೂನನ್ನು ಹಿಂಪಡೆದಿದೆ.

ಎಐಎಡಿಎಂಕೆ ಅವಧಿಯಲ್ಲಿ ಈ ರೀತಿಯ ಗೇಮ್​​ಗಳನ್ನು ಬ್ಯಾನ್ ಮಾಡಿದ್ದನ್ನು ವಿರೋಧಿಸಿ ಜಂಗಲ್​ ಗೇಮ್ಸ್, ಪ್ಲೇ ಗೇಮ್ಸ್​​ ಮತ್ತು ರೀಡ್​ ಡಿಜಿಟಲ್ ಆನ್​ಲೈನ್ ಗೇಮಿಂಗ್ ಕಂಪನಿಗಳು ಮದ್ರಾಸ್​ ಹೈಕೋರ್ಟ್​​ ಮೆಟ್ಟಿಲೇರಿದ್ದವು. ಆನ್​​ಲೈನ್​ ಗೇಮ್​​ಗಳನ್ನು ಬ್ಯಾನ್​ ಮಾಡುವ ಕಾನೂನನ್ನು ಹಿಂಪಡೆಯಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದವು.

ಈ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾ.ಸೆಂಥಿಲ್ ಕುಮಾರ್​ ರಾಮಮೂರ್ತಿ ಅವರಿದ್ದ ದ್ವಿಸದಸ್ಯ ಪೀಠ ನಿಷೇಧವನ್ನು ಹಿಂಪಡೆದಿದೆ.

ಗೇಮಿಂಗ್​ ಕಂಪನಿಗಳ ಜಲ್ಲಿಕಟ್ಟು ವಾದ

ಆನ್​ಲೈನ್ ಜೂಜು ಗೇಮ್​ಗಳನ್ನು ಬ್ಯಾನ್​ ಮಾಡಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದ ತಮಿಳುನಾಡು ಸರ್ಕಾರ, ಈ ಗೇಮ್​ಗಳಿಂದಾಗಿ ಸಾಕಷ್ಟು ಮಂದಿ ಆಸ್ತಿ ಪಾಸ್ತಿ ಕಳೆದುಕೊಳ್ಳುವುದು ಮಾತ್ರವಲ್ಲದೇ, ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯದಲ್ಲಿ ವಾದಿಸಿತ್ತು.

ಇದಕ್ಕೆ ಪ್ರತಿಯಾಗಿ ವಾದಿಸಿದ್ದ ಆನ್​ಲೈನ್​ ಕಂಪನಿಗಳು ಜಲ್ಲಿಕಟ್ಟು ಕೂಡಾ ಒಂದು ಆಟವಾಗಿದ್ದು, ಪ್ರತೀವರ್ಷ ಸುಮಾರು 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಾರೆ. ಆನ್​ಲೈನ್ ಗೇಮ್​ಗಳು ಪ್ರತಿಭೆಯನ್ನು ಆಧರಿಸಿರುತ್ತವೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಇಷ್ಟು ಮಂದಿ ಸತ್ತರೂ, ಈ ಸ್ಪರ್ಧೆ ಮುಂದುವರೆದಿದೆ ಎಂದು ವಾದಿಸಿದ್ದವು. ಜೊತೆಗೆ ಈ ಗೇಮ್​ಗಳು ಜೂಜು ಅಲ್ಲ ಹೇಳಿದ್ದವು.

ಈ ವಾದ- ಪ್ರತಿವಾದವನ್ನು ಆಲಿಸಿದ ಮದ್ರಾಸ್ ಹೈಕೋರ್ಟ್​ ಆನ್​ಲೈನ್​ ಗೇಮಿಂಗ್​​ಗಳ ನಿಷೇಧಕ್ಕೆ ಸರ್ಕಾರ ಸರಿಯಾದ ಕಾರಣ ನೀಡುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಆನ್​ಲೈನ್ ಗೇಮ್​ಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯಿತು.

ಇದನ್ನೂ ಓದಿ:ಇಂದು ಬೆಳಗ್ಗೆ ಶುಭ ಸುದ್ದಿ, ಮಧ್ಯಾಹ್ನ ಅಥವಾ ಸಂಜೆ ನೂತನ ಸಚಿವರ ಪ್ರಮಾಣವಚನ: ಸಿಎಂ

ABOUT THE AUTHOR

...view details