ನವದೆಹಲಿ:ಭಾಷಾ ವೈವಿಧ್ಯತೆಯನ್ನು ಹೆಚ್ಚಿಸುವ ಸಲುವಾಗಿ, ಸಂಸತ್ತಿನ ಸದಸ್ಯರು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗಾಗಿ 'ಭಾಷಾ ಕಲಿಕೆ ಕಾರ್ಯಕ್ರಮ'ವನ್ನು ಜೂನ್ 22 ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಪ್ರಜಾಪ್ರಭುತ್ವ ದೇಶಗಳ ಸಂಸದೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (PRIDE) ಮತ್ತು ಲೋಕಸಭಾ ಕಾರ್ಯಾಲಯವು ಜಂಟಿಯಾಗಿ ಆಯೋಜಿಸಿವೆ. ಫ್ರಾನ್ಸ್, ಜರ್ಮನಿ, ಜಪಾನ್, ಪೋರ್ಚುಗಲ್, ರಷ್ಯಾ ಮತ್ತು ಸ್ಪೇನ್‌ನ ರಾಯಭಾರಿಗಳು ಮತ್ತು ವಿದೇಶದಲ್ಲಿರುವ ಭಾರತೀಯ ನಿಯೋಗದ ಗಣ್ಯರು ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದಾರೆ.