ಕರ್ನಾಟಕ

karnataka

ETV Bharat / bharat

ಆನ್​ಲೈನ್​ ಗೇಮಿಂಗ್​ ಕಂಪೆನಿಗಳು ಬೆಟ್ಟಿಂಗ್​ನಲ್ಲಿ ಭಾಗವಹಿಸಲು ಅವಕಾಶವಿಲ್ಲ: ರಾಜೀವ್ ಚಂದ್ರಶೇಖರ್‌ - ಈಟಿವಿ ಭಾರತ ಕನ್ನಡ

ಆನ್​ಲೈನ್​ ಗೇಮಿಂಗ್​ ಕಂಪೆನಿಗಳಿಗೆ ಕರಡು ನಿಯಮಗಳನ್ನು ಕೇಂದ್ರ ಐಟಿ ಸಚಿವಾಲಯ ಪ್ರಕಟಿಸಿದ್ದು, ಮುಂದಿನ ತಿಂಗಳಲ್ಲಿ ನಿಯಮಗಳನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದೆ.

Rajeev Chandrasekhar
ರಾಜೀವ್ ಚಂದ್ರಶೇಖರ್‌

By

Published : Jan 3, 2023, 12:43 PM IST

ನವದೆಹಲಿ:ಈಗಾಗಲೇ ಸಿದ್ಧಪಡಿಸಲಾದ ಕರಡು ನಿಯಮಗಳನ್ವಯ ಯಾವುದೇ ಕ್ರೀಡೆಯ ಫಲಿತಾಂಶದ ಮೇಲೆ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಬೆಟ್ಟಿಂಗ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಖಾತೆ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್‌ ಹೇಳಿದ್ದಾರೆ.

ಕರಡು ನಿಯಮಗಳ ಪ್ರಕಾರ, ಎಲ್ಲಾ ಆನ್​ಲೈನ್​ ಗೇಮಿಂಗ್​ ಕಂಪೆನಿಗಳು ಸ್ವಯಂ ನಿಯಂತ್ರಕ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಸಚಿವಾಲಯವು ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಕರಡು ನಿಯಮಗಳನ್ನು ಪ್ರಕಟಿಸಿದೆ. ಈ ಕುರಿತು ಕಂಪನಿಗಳಿಗೆ ಪ್ರತಿಕ್ರಿಯಿಸಲು ಜನವರಿ 17 ರವರೆಗೆ ಗಡುವು ನೀಡಲಾಗಿದೆ. ಮುಂದಿನ ತಿಂಗಳಾರಂಭದಲ್ಲಿ ಆನ್‌ಲೈನ್ ಗೇಮಿಂಗ್ ನಿಯಮಗಳನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ 2021ರಲ್ಲಿ ಸಾಮಾಜಿಕ ಜಾಲತಾಣಗಳಿಗಾಗಿ ಮಾಹಿತಿ ತಂತ್ರಜ್ಞಾನ ನಿಯಮವನ್ನು ಜಾರಿಗೊಳಿಸಿತ್ತು. ಈ ನಿಯಮಗಳು ಆನ್​ಲೈನ್​ ಕಂಪೆನಿಗಳಿಗೆ ಇನ್ನು ಮುಂದೆ ಅನ್ವಯವಾಗಲಿದೆ. ಗೇಮಿಂಗ್​ ಕಂಪೆನಿಗಳ ಬಳಕೆದಾರರು ಭಾರತೀಯ ಕಾಯ್ದೆಗಳಿಗೆ ತಕ್ಕದಲ್ಲದ ರೀತಿಯಲ್ಲಿ ಆನ್​ಲೈನ್​ ಗೇಮ್​ಗಳನ್ನು ಅಪ್​ಲೋಡ್​ ಮಾಡಲು, ಪ್ರದರ್ಶಿಸಲು ಅವಕಾಶವಿಲ್ಲ ಎಂದು ಸಚಿವಾಲಯವು ಕರಡು ನಿಯಮದಲ್ಲಿ ತಿಳಿಸಿದೆ.

ABOUT THE AUTHOR

...view details