ಕರ್ನಾಟಕ

karnataka

ETV Bharat / bharat

ಸಾವು ಗೆದ್ದ ದಿವ್ಯಾಂಶಿ... ಕೊಳವೆ ಬಾವಿಗೆ ಬಿದ್ದಿದ್ದ 1 ವರ್ಷದ ಬಾಲಕಿಯ ರಕ್ಷಣೆ

ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 1 ವರ್ಷದ ಬಾಲಕಿಯ ರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದ್ದು, ಹೆಚ್ಚಿನ ನಿಗಾ ವಹಿಸುವ ಕಾರಣ ಬಾಲಕಿಯನ್ನ ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Girl rescued from borewell
Girl rescued from borewell

By

Published : Dec 17, 2021, 3:39 AM IST

ಛತ್ತರ್​ಪುರ(ಮಧ್ಯಪ್ರದೇಶ): ಆಟವಾಡುತ್ತಿದ್ದ ವೇಳೆ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 1 ವರ್ಷದ ದಿವ್ಯಾಂಶಿ ಸಾವು ಗೆದ್ದು ಹೊರಬಂದಿದ್ದಾಳೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಆಕೆಯನ್ನ ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಳವೆ ಬಾವಿಗೆ ಬಿದ್ದಿದ್ದ 1 ವರ್ಷದ ಬಾಲಕಿಯ ರಕ್ಷಣೆ

ನೌಗಾಂವ್​ ಪೊಲೀಸ್ ಠಾಣಾ ವ್ಯಾಪ್ತಿಯ ಲುಗಾಸಿ ಔಟ್​​ಪೋಸ್ಟ್​ನ ದೌನಿ ಗ್ರಾಮದಲ್ಲಿ ಒಂದು ವರ್ಷದ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಈ ವೇಳೆ ಆಕೆಯ ಅಳುವ ಶಬ್ಧ ಕೇಳಿರುವ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್​​ ಸುನೀತಾ, ನೌಗಾಂವ್​​ ಠಾಣೆ ಪ್ರಭಾರಿ ದೀಪಕ್ ಯಾದವ್​, ಜಿಲ್ಲಾಧಿಕಾರಿ ಸಂದೀಪ್​ ಜಿಆರ್​​​​ ಸೇರಿದಂತೆ ಅನೇಕರು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.

ಮಗು ತೆರೆದ ಕೊಳವೆ ಬಾವಿಯಲ್ಲಿ 15 ಅಡಿ ಆಳದಲ್ಲಿ ಸಿಲುಕಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡಿದ್ದಾರೆ. ಜೊತೆಗೆ ಸೇನಾ ಸಿಬ್ಬಂದಿ ಜೊತೆ ಭರದ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಪೊಲೀಸರು ಬಾಲಕಿಯನ್ನ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಇದನ್ನೂ ಓದಿರಿ:ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್​ ಹೊರತೆಗೆದ ಹೈದರಾಬಾದ್​ ವೈದ್ಯರು

ಒಳಗಿನಿಂದ ಅಳುವ ಸದ್ದು:ಬಾಲಕಿ ಆಟವಾಡುತ್ತಾ ಎಲ್ಲೋ ಇದ್ದಾಳೆ ಎಂದು ಪೋಷಕರು ತಿಳಿದಿದ್ದರು. ತುಂಬಾ ಹೊತ್ತಾದರೂ ಬಾರದ ಕಾರಣ ಹುಡುಕಾಟ ಆರಂಭಿಸಿದಾಗ ಗದ್ದೆಯ ಬೋರ್‌ನಿಂದ ದಿವ್ಯಾಂಶಿ ಆಳುವ ಶಬ್ಧ ಕೇಳಿದೆ. ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಮೊದಲು ಆಕೆ ಹೊರತರಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಬಾಲಕಿ ಬಿದ್ದಿರುವ ಬೋರ್​​ವೆಲ್​​ನ​​ ಆಳ 15 ಅಡಿ ಇದೆ ಎಂದು ತಿಳಿದು ಬಂದಿತ್ತು. ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಜಿಲ್ಲಾಡಳಿತ ಇದೀಗ ಅದರಲ್ಲಿ ಯಶಸ್ವಿಯಾಗಿದೆ.

ABOUT THE AUTHOR

...view details