ಪಾಟ್ನಾ(ಬಿಹಾರ):ಬೈಕ್ ಮೇಲೆ ಪ್ರಯಾಣಿಸುವಾಗ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಸೂಲಿ ಮಾಡುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ನ ವರ್ತನೆಗೆ ಇನ್ನಿಲ್ಲದ ಆಶ್ಚರ್ಯ ವ್ಯಕ್ತವಾಗಿದೆ. ಬಿಹಾರದ ಪಾಟ್ನಾದಲ್ಲಿನ ಕಂಕರ್‌ಬಾಗ್‌ನ ಟ್ರಾಫಿಕ್ ಚೆಕ್ ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ.
ಕಾರು ಡ್ರೈವ್ ಮಾಡಿಕೊಂಡು ತೆರಳುತ್ತಿದ್ದ ವಕೀಲನೊಬ್ಬನಿಗೆ ಹೆಲ್ಮೆಟ್ ಹಾಕಿಲ್ಲವೆಂದು ಸಾವಿರ ರೂ.ದಂಡ ಹಾಕಿರುವ ಘಟನೆ ನಡೆದಿದೆ. ಕನಕರಬಾಗ್ ಟ್ರಾಫಿಕ್ ಸಿಗ್ನಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಪಾಟ್ನಾ ಹೈಕೋರ್ಟ್ನ ವಕೀಲ ಪ್ರಕಾಶ್ ಚಂದ್ರ ಅಗರವಾಲ್ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಹಾಕಿಲ್ಲವೆಂದು 1,000 ರೂಪಾಯಿ ದಂಡ ಕಟ್ಟುವಂತೆ ರಶೀದಿ ಅವರ ಕೈಗೆ ನೀಡಿದ್ದಾರೆ.