ಕುಲ್ಗಾಮ್(ಜಮ್ಮು ಕಾಶ್ಮೀರ):ಕುಲ್ಗಾಮ್ನಲ್ಲಿ ಗುಂಡಿನ ಮೊರೆತ ಮತ್ತೆ ಕೇಳಿ ಬಂದಿದೆ. ಭದ್ರತಾ ಸಿಬ್ಬಂದಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.
ಕುಲ್ಗಾಮ್‌ನ ಮಿಶಿಪೋರಾ ಪ್ರದೇಶದಲ್ಲಿ ಜೂನ್ 14 ರಿಂದ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂದು ಕೂಡ ನಡೆದ ಕಾರ್ಯಾಚರಣೆಯಲ್ಲಿ ಯೋಧರು ಉಗ್ರನನ್ನು ಹೊಡೆದುರುಳಿಸಿದ್ದಾರೆ. ಈ ಪ್ರದೇಶದಲ್ಲಿ ಇನ್ನಷ್ಟು ಉಗ್ರರು ಅಡಗಿದ್ದ ಬಗ್ಗೆ ಮಾಹಿತಿ ಇದ್ದು ಎನ್‌ಕೌಂಟರ್ ಕಾರ್ಯಾಚರಣೆ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಕೊಕ್ರನಾಗ್‌ನಲ್ಲಿ ಗುಂಡಿನ ಕಾಳಗ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕೆರಾನಾಗ್‌ನ ಹಂಗ್ಲಗುಂಡ್ ಪ್ರದೇಶದಲ್ಲೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಉಗ್ರರಿರುವ ಬಗ್ಗೆ ಸುಳಿವು ಪಡೆದಿದ್ದು, ಪೊಲೀಸ್ ಪಡೆ ಮತ್ತು ಸಿಆರ್‌ಪಿಎಫ್ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಈ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ:ಯುಪಿ ಬುಲ್ಡೋಜರ್ ಕ್ರಮ ನಿಲ್ಲಿಸಲಾಗದು, ಆದ್ರೆ ಕಾನೂನು ವ್ಯಾಪ್ತಿಯಲ್ಲಿರಬೇಕು: ಸುಪ್ರೀಂಕೋರ್ಟ್