ಕರ್ನಾಟಕ

karnataka

ETV Bharat / bharat

ಕೆರೆಗೆ ಉರುಳಿಬಿದ್ದ ಶಾಲಾ ವಿದ್ಯಾರ್ಥಿಗಳನ್ನ ಹೊತ್ತೊಯ್ಯುತ್ತಿದ್ದ ಬಸ್​: ಓರ್ವ ಸಾವು, ಕೆಲವರಿಗೆ ಗಾಯ - ವಿದ್ಯಾರ್ಥಿಗಳನ್ನ ಹೊತ್ತೊಯ್ಯುತ್ತಿದ್ದ ಬಸ್​

ನಿಯಂತ್ರಣ ಕಳೆದುಕೊಂಡಿರುವ ಶಾಲಾ ಬಸ್​ವೊಂದು ಕೆರೆಗೆ ಉರುಳಿಬಿದ್ದಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದ್ದು, ಐವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ.

school bus plunged into a roadside water pond
school bus plunged into a roadside water pond

By

Published : Oct 20, 2021, 5:43 PM IST

Updated : Oct 20, 2021, 6:36 PM IST

ಶ್ರೀಕಾಕುಳಂ(ಆಂಧ್ರಪ್ರದೇಶ):ವಿದ್ಯಾರ್ಥಿಗಳನ್ನ ಹೊತ್ತು ಸಾಗುತ್ತಿದ್ದ ಶಾಲಾ ಬಸ್​ವೊಂದು ತಾಂತ್ರಿಕ ವೈಫಲ್ಯದಿಂದಾಗಿ ಕೆರೆಗೆ ಉರುಳಿಬಿದ್ದಿದೆ. ಪರಿಣಾಮ ಒಬ್ಬ ಸ್ಟೂಡೆಂಟ್​​ ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಕೆರೆಗೆ ಉರುಳಿದ ವಿದ್ಯಾರ್ಥಿಗಳ ಹೊತ್ತೊಯ್ಯುತ್ತಿದ್ದ ಬಸ್​

ಶ್ರೀಕಾಕುಳಂ ಜಿಲ್ಲೆಯ ಎಚೆರ್ಲಾ ಮಂಡಲ್​ ಬಳಿ ಈ ಘಟನೆ ನಡೆದಿದ್ದು, ರಸ್ತೆ ಪಕ್ಕದಲ್ಲಿದ್ದ ಕೆರೆಗೆ ಬಸ್​ ದಿಢೀರ್​ ಆಗಿ ಉರುಳಿ ಬಿದ್ದಿದೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಎಚೆರ್ಲಾ ಮಂಡಲ್​ ಸಬ್​ ಇನ್ಸ್​​ಪೆಕ್ಟರ್​​​ ರಾಮು, ಶಾಲಾ ವಿದ್ಯಾರ್ಥಿಗಳನ್ನ ಹೊತ್ತ ಬಸ್​​​ ಬಂಡಿವನಿಪೇಟ್​​ನಿಂದ ಕೊಂಗ್ರಾಮ್​ಗೆ ತೆರಳುತ್ತಿತು.

ಕೆರೆಗೆ ಉರಳಿ ಬಿದ್ದ ಶಾಲಾ ವಿದ್ಯಾರ್ಥಿಗಳ ಹೊತ್ತೊಯ್ಯುತ್ತಿದ್ದ ಬಸ್​​

ಈ ವೇಳೆ, ನಿಯಂತ್ರಣ ಕಳೆದುಕೊಂಡು ಕರೆಗೆ ಉರುಳಿ ಬಿದ್ದಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಐವರಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಅವರ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದಿದ್ದಾರೆ.

ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ

ಇದನ್ನೂ ಓದಿರಿ:CCTV Video.. ಮಾಜಿ ಲವರ್​ಗೆ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆಗೈದ ಪಾಗಲ್​ ಪ್ರೇಮಿ

ಬಸ್​ನಲ್ಲಿನ ತಾಂತ್ರಿಕ ದೋಷದಿಂದಾಗಿ ಈ ಘಟನೆ ನಡೆದಿದ್ದು, ಬ್ರೇಕ್​ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದ ಡ್ರೈವರ್ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದಿದ್ದಾರೆ.

Last Updated : Oct 20, 2021, 6:36 PM IST

ABOUT THE AUTHOR

...view details