ಹೈದರಾಬಾದ್:ಇಲ್ಲಿನ ರಾಮ್ ನಗರದಲ್ಲಿರುವ ಗಂಗಯ್ಯ ಗಾರಿ ಆಸ್ಪತ್ರೆ (ಜಿಜಿ)ಯಲ್ಲಿ ಕೇವಲ ಒಂದು ರೂಪಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ನಗರದೆಲ್ಲೆಡೆ ಹರಡುತ್ತಿದ್ದಂತೆ ಜಿಜಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಸುತ್ತಮುತ್ತಲಿನ ಜನರು ಮಾತ್ರವಲ್ಲದೇ, ನಗರದ ವಿವಿಧ ಭಾಗಗಳಿಂದ ರೋಗಿಗಳು ಈ ಆಸ್ಪತ್ರೆಗೆ ಬರುತ್ತಿದ್ದಾರೆ. ಅತ್ಯಲ್ಪ ಶುಲ್ಕದಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿರುವ ಹಿನ್ನೆಲೆ ಹೆಚ್ಚು ಸಂಖ್ಯೆಯನ್ನು ಬಡ ರೋಗಿಗಳು ಬರುತ್ತಿದ್ದಾರೆ.
ಜಿಜಿ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವಿಭಾಗ, ಸ್ತ್ರೀರೋಗ ವಿಭಾಗ, ಪೀಡಿಯಾಟ್ರಿಕ್, ಜನರಲ್ ಫಿಸಿಶಿಯನ್, ಜನರಲ್ ಸರ್ಜನ್ ಮತ್ತು ಡರ್ಮಟಾಲಜಿ ವಿಭಾಗಗಳಿವೆ. ಇವುಗಳೊಂದಿಗೆ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ಘಟಕಗಳು ಸಹ ಲಭ್ಯವಿದೆ.
ಅಲ್ಲಿ ನಡೆಸುವ ಎಲ್ಲಾ ಲ್ಯಾಬ್ ಪರೀಕ್ಷೆಗಳಿಗೆ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಶೇ.50 ರಷ್ಟು ರಿಯಾಯಿತಿ ಶುಲ್ಕವನ್ನು ಮಾತ್ರ ಪಡೆಯಲಾಗುತ್ತಿದೆ ಎಂದು ಜಿಜಿ ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ವೈದ್ಯರ ಪರೀಕ್ಷೆ ಬಳಿಕ ಅಲ್ಲಿರುವ ಔಷಧಾಲಯದಲ್ಲಿ ಔಷಧ ಖರೀದಿಸಿದರೆ ಶೇ.40ರಷ್ಟು ರಿಯಾಯಿತಿ ನೀಡಲಾಗುತ್ತದೆ.