ವಿಜಯವಾಡ :ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಚಾರ್ಜ್ಗೆ ಇಟ್ಟ ವೇಳೆ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ವಿಜಯವಾಡ ಸೂರ್ಯರಾವ್‌ಪೇಟೆಯ ಗುಲಾಬಿ ತೋಟದಲ್ಲಿ ನಡೆದಿದೆ. ಒಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಶಿವಕುಮಾರ್ ಎಂಬ ವ್ಯಕ್ತಿ ನಿನ್ನೆ ಹೊಸ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದು, ಮನೆಯ ಬೆಡ್ರೂಂನಲ್ಲಿ ಬೈಕ್ ಬ್ಯಾಟರಿ ಚಾರ್ಜ್ಗೆ ಇಟ್ಟಿದ್ದರು. ಬೆಳಗ್ಗೆ ಬ್ಯಾಟರಿ ಸ್ಫೋಟಗೊಂಡು ಏಕಾಏಕಿ ಮನೆಗೆ ಬೆಂಕಿ ಹತ್ತಿಕೊಂಡಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಶಿವಕುಮಾರ್ ಅವರ ಜೊತೆ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಬೆಂಕಿ ಅವಘಡದಲ್ಲಿ ಸಿಲುಕಿದ್ದರು. ಬಾಗಿಲು ಒಡೆದು ಮನೆಯ ಒಳಗೆ ನುಗ್ಗಿದ ಸ್ಥಳೀಯರು ಅವರನ್ನು ರಕ್ಷಿಸಲು ಯತ್ನಸಿದ್ದಾರೆ.