ಕರ್ನಾಟಕ

karnataka

ETV Bharat / bharat

ಅವಂತಿಪೋರಾ ಎನ್‌ಕೌಂಟರ್‌: ಮತ್ತೊಬ್ಬ ಉಗ್ರನ ಹತ್ಯೆಗೈದ ಸೇನೆ - ಉಗ್ರನ ಹತ್ಯೆಗೈದ ಸೇನೆ

ಅವಂತಿಪೋರಾದ ವಂಡಕ್‌ಪೋರಾ ಪ್ರದೇಶದಲ್ಲಿ ಸೇನಾಪಡೆಗಳು ಮತ್ತು ಭಯೋತ್ವಾದರ ನಡುವೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ.

ಅವಂತಿಪೋರಾ ಎನ್‌ಕೌಂಟರ್‌
ಅವಂತಿಪೋರಾ ಎನ್‌ಕೌಂಟರ್‌

By

Published : Jul 11, 2022, 2:24 PM IST

ಜಮ್ಮು ಮತ್ತು ಕಾಶ್ಮೀರ: ಅವಂತಿಪೋರಾದ ವಂಡಕ್‌ಪೋರಾ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಉಗ್ರನನ್ನು ಯೋಧರು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಂತಿಪೋರಾದ ವಂಡಕ್‌ಪೋರಾ ಪ್ರದೇಶದಲ್ಲಿ ಭಯೋತ್ವಾದಕರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಸೇನಾಪಡೆಗಳು ಕಾರ್ಯಾಚರಣೆಗೆ ಮುಂದಾದಾಗ, ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರತಿದಾಳಿ ನಡೆಸಿದ ಯೋಧರು ಒಟ್ಟು ಇಬ್ಬರು ಉಗ್ರರನ್ನು ಹೊಸಕಿ ಹಾಕಿದ್ದಾರೆ. ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details