ಕರ್ನಾಟಕ

karnataka

ETV Bharat / bharat

COVID: ಕೊರೊನಾಕ್ಕೆ ಸಿಂಹಿಣಿಯೂ ಬಲಿ: 9 ಸಿಂಹಗಳಿಗೆ ಪಾಸಿಟಿವ್ - ತಮಿಳುನಾಡಿನಲ್ಲಿ ಸಿಂಹಗಳಿಗೆ ಕೊರೊನಾ

ಮೇ 26 ರಂದು ಸಫಾರಿ ಪಾರ್ಕ್​ ಪ್ರದೇಶದಲ್ಲಿ ಇರಿಸಲಾಗಿದ್ದ ಐದು ಸಿಂಹಗಳಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಮೊದಲಿಗೆ ಹಸಿವು ಕಡಿಮೆಯಾಗುವುದು, ಕೆಮ್ಮು ಕಂಡು ಬಂದಿದೆ. ಹೀಗಾಗಿ ಮೃಗಾಲಯದ ಪಶು ವೈದ್ಯಕೀಯ ತಂಡವು ಸಿಂಹಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದೆ.

ಒಂದು ಸಿಂಹಿಣಿ ಸಾವು, 9 ಸಿಂಹಗಳಿಗೆ ಪಾಸಿಟಿವ್
ಒಂದು ಸಿಂಹಿಣಿ ಸಾವು, 9 ಸಿಂಹಗಳಿಗೆ ಪಾಸಿಟಿವ್

By

Published : Jun 4, 2021, 6:09 PM IST

ಚೆನ್ನೈ: ಅರಿಗ್ನಾರ್​ ಅಣ್ಣ ಮೃಗಾಲಯದಲ್ಲಿ ಕೋವಿಡ್​ಗೆ ಒಂದು ಸಿಂಹ ಮೃತಪಟ್ಟಿದ್ದು, 9 ಸಿಂಹಗಳಿಗೆ ಕೊರೊನಾ ದೃಢಪಟ್ಟಿದೆ.

ಈ ಕುರಿತು ಮೃಗಾಲಯವು ಪ್ರಕಟಣೆ ಹೊರಡಿಸಿದ್ದು, ಮೇ 26 ರಂದು ಸಫಾರಿ ಪಾರ್ಕ್​ ಪ್ರದೇಶದಲ್ಲಿ ಇರಿಸಲಾಗಿದ್ದ ಐದು ಸಿಂಹಗಳಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಮೊದಲಿಗೆ ಹಸಿವು ಕಡಿಮೆಯಾಗುವುದು, ಕೆಮ್ಮು ಕಂಡು ಬಂದಿದೆ. ಹೀಗಾಗಿ ಮೃಗಾಲಯದ ಪಶು ವೈದ್ಯಕೀಯ ತಂಡವು ಸಿಂಹಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದೆ.

ಮೃಗಾಲಯದ ಪ್ರಕಟಣೆ

9 ವರ್ಷದ ನೀಲಾ ಎಂಬ ಸಿಂಹಿಣಿಗೆ ಅನಾರೋಗ್ಯ ಬಿಗಡಾಯಿಸಿದ್ದು, ಜೂನ್ 3 ರಂದು ಕೊನೆಯುಸಿರೆಳೆದಿದೆ. ಆದರೆ, ಆ ಸಿಂಹಿಣಿಗೆ ಕೊರೊನಾದ ಯಾವುದೇ ಲಕ್ಷಣಗಳಿರಲಿಲ್ಲ ಎಂದು ತಿಳಿದು ಬಂದಿದೆ.

ಸಿಂಹಗಳ ರಕ್ತದ ಮಾದರಿಗಳನ್ನು ಮಧ್ಯಪ್ರದೇಶದ ಭೋಪಾಲ್​ನಗರದ ಎನ್‌ಐಎಚ್‌ಎಸ್‌ಎಡಿಗೆ ಕಳುಹಿಸಲಾಗಿದೆ. ಲ್ಯಾಬ್ ವರದಿಗಳ ಪ್ರಕಾರ, ಕಳುಹಿಸಿದ 11 ರಲ್ಲಿ 9 ಸಿಂಹಗಳಿಗೆ ಕೋವಿಡ್ ದೃಢಪಟ್ಟಿದೆ.

ಮೃತ ಸಿಂಹಿಣಿಯ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್​ನ ಸೆಲ್ಯುಲಾರ್ ಮತ್ತು ಆಣ್ವಿಕಾದ ಜೀವಶಾಸ್ತ್ರ ಕೇಂದ್ರಕ್ಕೂ ಕಳುಹಿಸಲಾಗಿದೆ. ಪಾಸಿಟಿವ್ ಬಂದಿರುವ ಅಷ್ಟೂ ಸಿಂಹಗಳಿಗೆ ಪ್ರತ್ಯೇಕವಾಗಿರಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ABOUT THE AUTHOR

...view details