ಮುಂಬೈ:ವಿಷಾನಿಲ ಸೇವಿಸಿಒಬ್ಬ ಮೃತಪಟ್ಟು, ಇಬ್ಬರು ತೀವ್ರವಾಗಿ ಅಸ್ವಸ್ಥರಾದ ಘಟನೆ ಇಲ್ಲಿನ ಸಬರ್ಬನ್ ಘಾಟ್ಕೋಪರ್ ಕೈಗಾರಿಕಾ ಪ್ರದೇಶದಲ್ಲಿಇಂದು ನಡೆದಿದೆ.
ಈಶಾನ್ಯ ಮುಂಬೈನ ಕುರ್ಲಾ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಬೆಳಗ್ಗೆ 8 ಗಂಟೆಗೆ ಮೆಥನಾಲ್ ಮತ್ತು ಸೈನೂರಿಕ್ ಕ್ಲೋರೈಡ್ ಅನಿಲ ಸೋರಿಕೆಯಾಗಿದೆ. ಈ ವೇಳೆ ಅಲ್ಲಿಯೇ ಇದ್ದ ರಾಮ್ ನಿವಾಸ್ ಸರೋದ್(36) ವಿಷಕಾರಿ ಅನಿಲವನ್ನು ಸೇವಿಸಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೂಬಿನ್ ಸೋಲ್ಕರ್, ಸರ್ವಾಂಶ್ ಸೋನಾವನೆ ತೀವ್ರ ಅಸ್ವಸ್ಥರಾಗಿದ್ದು ಬಿಎಂಸಿಯ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.