ಕರ್ನಾಟಕ

karnataka

ETV Bharat / bharat

ಗ್ರೆನೇಡ್​ ಎಸೆದು ಇಬ್ಬರು ಕಾರ್ಮಿಕರ ಹತ್ಯೆಗೈದಿದ್ದ ಹೈಬ್ರಿಡ್​ ಉಗ್ರ ಹತ

ಗ್ರೆನೇಡ್​ ಎಸೆದು ಇಬ್ಬರು ಕಾರ್ಮಿಕರ ಹತ್ಯೆಗೈದಿದ್ದ ನಿಷೇಧಿತ ಸಂಘಟನೆಯಾದ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಗೆ ಸೇರಿದ ಹೈಬ್ರಿಡ್ ಭಯೋತ್ಪಾದಕನೋರ್ವ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

one hybrid militant killed
ಹೈಬ್ರಿಡ್​ ಉಗ್ರ ಹತ

By

Published : Oct 19, 2022, 10:10 AM IST

ಶ್ರೀನಗರ(ಜಮ್ಮು ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಹೈಬ್ರಿಡ್ ಉಗ್ರಗಾಮಿಯನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ ಮಾಡಿ, ಶೋಪಿಯಾನ್ ಜಿಲ್ಲೆಯ ಹೆರ್ಮೈನ್ ಪ್ರದೇಶದಲ್ಲಿ ಉತ್ತರಪ್ರದೇಶದ ಇಬ್ಬರು ಕಾರ್ಮಿಕರ ಮೇಲೆ ಗ್ರೆನೇಡ್​ ಎಸೆದು ಹತ್ಯೆ ಮಾಡಿದ್ದ ಆರೋಪದಡಿ ಬಂಧಿಸಲ್ಪಟ್ಟಿದ್ದ ಇಮ್ರಾನ್ ಬಶೀರ್ ಗನೈ ಹತನಾಗಿದ್ದಾನೆ.

ಬಂಧಿತ ಹೈಬ್ರಿಡ್ ಭಯೋತ್ಪಾದಕ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸ್ ಮತ್ತು ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆ ಮುಂದುವರೆಸಿದವು. ಈ ವೇಳೆ ಇಮ್ರಾನ್ ಬಶೀರ್ ಗನೈ ಭಯೋತ್ಪಾದಕನ ಗುಂಡಿನ ದಾಳಿಯಿಂದ ಕೊಲ್ಲಲ್ಪಟ್ಟನು ಎಂದು ತಿಳಿಸಿದ್ದಾರೆ.

ಕಾಶ್ಮೀರ ವಲಯ ಪೊಲೀಸರ ಟ್ವೀಟ್‌

ಇದನ್ನೂ ಓದಿ:ಗ್ರೆನೇಡ್​ ಎಸೆದು ಇಬ್ಬರು ಕಾರ್ಮಿಕರ ಹತ್ಯೆ.. ಎಲ್​ಇಟಿ ಉಗ್ರನ ಸೆರೆಹಿಡಿದ ಸೇನೆ

ಉಗ್ರರ ಅಡಗುತಾಣ/ಸ್ಥಳದಿಂದ ದೋಷಾರೋಪಣೆಯ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಚರಣೆ ಮುಂದುವರೆದಿದೆ. ಇನ್ನೂ ಹೆಚ್ಚಿನ ವಿವರಗಳನ್ನು ಅನುಸರಿಸಲಾಗುವುದು ಎಂದು ಪೊಲೀಸರು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details