ಕರ್ನಾಟಕ

karnataka

ETV Bharat / bharat

ಪಂಜಾಬ್​ನ ಅಮ್ಲೋಹ್​ದಲ್ಲಿ ಪಟಾಕಿ ಸ್ಫೋಟ.. ಓರ್ವ ಸಾವು, ಇನ್ನೋರ್ವನಿಗೆ ಗಂಭೀರ ಗಾಯ - One Died After Blast In Firecrackers At amloh Of Punjab

ಪಂಜಾಬ್​ನ ಅಮ್ಲೋಹ್​ದಲ್ಲಿ ಪಟಾಕಿ ಸಾಗಿಸುತ್ತಿದ್ದ ಬೈಕ್​ ಸ್ಫೋಟಗೊಂಡಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

One Died After Blast In Firecrackers At amloh Of Punjab
ಪಂಜಾಬ್​ನ ಅಮ್ಲೋಹ್​ದಲ್ಲಿ ಪಟಾಕಿ ಸ್ಫೋಟ

By

Published : Apr 19, 2021, 5:05 PM IST

ಅಮ್ಲೋಹ್(ಪಂಜಾಬ್​)​: ಪಂಜಾಬ್​ನ ಅಮ್ಲೋಹ್​ದಲ್ಲಿ ಪಟಾಕಿ ಸಾಗಿಸುತ್ತಿದ್ದ ಬೈಕ್​ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿಯ ಪ್ರಕಾರ, ಈ ಕ್ರ್ಯಾಕರ್‌ಗಳನ್ನು ಮಾಲೋಡ್‌ನಿಂದ ಅಮ್ಲೋಹ್‌ಗೆ ಸಾಗಿಸಲಾಗುತ್ತಿತ್ತು.

ಪಂಜಾಬ್​ನ ಅಮ್ಲೋಹ್​ದಲ್ಲಿ ಪಟಾಕಿ ಸ್ಫೋಟ

ಇಬ್ಬರು ಮಾಲೋಡ್‌ನಿಂದ ಅಮ್ಲೋಹ್ ಮಾರುಕಟ್ಟೆಗೆ ಬೈಕ್​ನಲ್ಲಿ ಪಟಾಕಿ ತುಂಬಿದ ಕೆಲವು ಚೀಲಗಳನ್ನು ಪೂರೈಸಲು ಹೊರಟಿದ್ದರು. ಈ ವೇಳೆ, ದಾರಿ ಮಧ್ಯೆ ಸ್ಫೋಟಗೊಂಡಿದ್ದು, ರಸ್ತೆ ಬದಿ ಕುಳಿತಿದ್ದ ಇಬ್ಬರಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಅಮ್ಲೋಹ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದ ಭೀಕರತೆಗೆ ಬೀದಿಯಲ್ಲಿ ಕುಳಿತಿದ್ದ ವ್ಯಕ್ತಿಯು ಸುಮಾರು 25 ಅಡಿ ಜಿಗಿದಿದ್ದು ಮತ್ತು ಒಬ್ಬ ವ್ಯಕ್ತಿಯು ಇನ್ನೊಬ್ಬರ ಮನೆಯಲ್ಲಿ ಹಾರಿ ಬಿದ್ದಿದ್ದಾನೆ. ಸ್ಫೋಟದ ಶಬ್ದ ಹಲವಾರು ಕಿಲೋಮೀಟರ್ ದೂರ ಕೇಳಿಬಂತು.

ABOUT THE AUTHOR

...view details