ETV Bharat Karnataka

ಕರ್ನಾಟಕ

karnataka

ETV Bharat / bharat

ನವಿ ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: ಓರ್ವ ಸಾವು - ಕಟ್ಟಡ ಕುಸಿತ ಓರ್ವ ಸಾವು

ನವಿ ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.

Mumbai Building Collapse
ನವಿ ಮುಂಬೈನಲ್ಲಿ ಕಟ್ಟಡ ಕುಸಿದು ಓರ್ವ ಸಾವು
author img

By

Published : Oct 2, 2022, 10:53 AM IST

ಮುಂಬೈ (ಮಹಾರಾಷ್ಟ್ರ):ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಓರ್ವ ಮೃತಪಟ್ಟಿರುವ ಘಟನೆ ನವಿ ಮುಂಬೈನ ಕೋಪರ್ಖೈರಣೆ ಪ್ರದೇಶದ ಬೊಂಕೋಡ್ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪ್ರಿಯವರ್ತ್ ಸರ್ವೇಶ್ವರ್ ದತ್ (31) ಎಂದು ಗುರುತಿಸಲಾಗಿದೆ.

ಕಟ್ಟಡ ತುಂಬಾ ಹಳೆಯದಾಗಿದ್ದು, ಅದರಲ್ಲಿ 41 ಕುಟುಂಬಗಳು ವಾಸಿಸುತ್ತಿದ್ದವು. ಶನಿವಾರ ಮಧ್ಯರಾತ್ರಿ ಕಟ್ಟಡದ ಒಂದು ಬದಿ ಸಂಪೂರ್ಣವಾಗಿ ಕುಸಿದಿದೆ ಎಂದು ನವಿ ಮುಂಬೈ ಮಹಾನಗರ ಪಾಲಿಕೆಯ ವಿಭಾಗೀಯ ಅಗ್ನಿಶಾಮಕ ಅಧಿಕಾರಿ ಪುರುಷೋತ್ತಮ್ ಜಾಧವ್ ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿವೆ. ಅವಶೇಷಗಳನ್ನು ತೆರವುಗೊಳಿಸುವಾಗ ಓರ್ವನ ಮೃತದೇಹ ಪತ್ತೆಯಾಗಿದೆ. ಇನ್ನೂ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಫುಟ್ಬಾಲ್ ಪಂದ್ಯ ಸೋತಿದ್ದಕ್ಕೆ ಮೈದಾನದಲ್ಲೇ ಹಿಂಸಾಚಾರ.. 127 ಅಭಿಮಾನಿಗಳು ದುರ್ಮರಣ

ABOUT THE AUTHOR

author-img

...view details