ಕರ್ನಾಟಕ

karnataka

ETV Bharat / bharat

ಪತ್ನಿ ಜತೆ ಜಗಳವಾಡಿ, ಮಕ್ಕಳನ್ನು ನೆಲಕ್ಕೆ ಬಡಿದ ಪಾಪಿ : ಒಂದು ಮಗು ಸಾವು, ಮತ್ತೊಂದು ಗಂಭೀರ - ಮಕ್ಕಳನ್ನು ಎತ್ತಿ ನೆಲಕ್ಕೆ ಬಡಿದ ಪಾಪಿ

ಶುಕ್ರವಾರ ಹೆಂಡತಿಯ ಜೊತೆ ಯಾವುದೋ ವಿಚಾರಕ್ಕೆ ಜಗಳವಾಡಿದ ಪ್ರಸಾದ್ ಎಂಬಾತ, ತನ್ನ ಇಬ್ಬರು ಮಕ್ಕಳನ್ನು ಎತ್ತಿ ನೆಲಕ್ಕೆ ಬಡಿದಿದ್ದಾನೆ. ಎರಡು ವರ್ಷದ ಹೆಣ್ಣು ಮಗು ಪ್ರಣವಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದು ವರ್ಷದ ಮಗುವಿಗೆ ಗಂಭೀರವಾಗಿ ಗಾಯವಾಗಿದೆ..

one-child-killed-and-another-one-injured-in-wife-and-husband-clash
ಪತ್ನಿಯೊಂದಿಗೆ ಜಗಳವಾಡಿ, ಮಕ್ಕಳನ್ನು ನೆಲಕ್ಕೆ ಬಡಿದ ಪಾಪಿ: ಮಗು ಸಾವು, ಮತ್ತೊಂದು ಗಂಭೀರ

By

Published : Jul 10, 2021, 9:00 PM IST

ವಿಜಯನರಗರಂ(ಆಂಧ್ರಪ್ರದೇಶ) :ಪತಿ ಮತ್ತು ಪತ್ನಿಯ ನಡುವಿನ ಜಗಳದಲ್ಲಿ ಒಂದು ಮಗು ಸಾವನ್ನಪ್ಪಿ, ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ.

ವಿಜಯನಗರಂ ಜಿಲ್ಲೆಯ ಸಲರು ಮಂಡಲ್​ನ ಜೋಡಿಮಾಮಿಡಿವಲಸ ಎಂಬಲ್ಲಿ ಈ ಘಟನೆ ನಡೆದಿದ್ದು, ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ತನ್ನ ಮುಗ್ಧ ಮಕ್ಕಳ ಮೇಲೆ 'ಪ್ರತಾಪ' ತೋರಿದ್ದಾನೆ.

ಶುಕ್ರವಾರ ಹೆಂಡತಿಯ ಜೊತೆ ಯಾವುದೋ ವಿಚಾರಕ್ಕೆ ಜಗಳವಾಡಿದ ಪ್ರಸಾದ್ ಎಂಬಾತ, ತನ್ನ ಇಬ್ಬರು ಮಕ್ಕಳನ್ನು ಎತ್ತಿ ನೆಲಕ್ಕೆ ಬಡಿದಿದ್ದಾನೆ. ಎರಡು ವರ್ಷದ ಹೆಣ್ಣು ಮಗು ಪ್ರಣವಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದು ವರ್ಷದ ಮಗುವಿಗೆ ಗಂಭೀರವಾಗಿ ಗಾಯವಾಗಿದೆ.

ಇದನ್ನು ಗಮನಿಸಿದ ಸ್ಥಳೀಯರು ಪಾಪಿ ತಂದೆಗೆ ಥಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ

ABOUT THE AUTHOR

...view details