ಕರ್ನಾಟಕ

karnataka

ETV Bharat / bharat

ತಿರುವನಂತಪುರ: ಬಕೆಟ್​ನಲ್ಲಿ ಮುಳುಗಿ ಹಸುಳೆ ಸಾವು - ಬಕೆಟ್​ನಲ್ಲಿ ಮುಳುಗಿ ಹಸುಳೆ ಸಾವು

ಮಗು ನೀರಲ್ಲಿ ಮುಳುಗುತ್ತಿರುವಾಗ ತಾಯಿ ನಮಾಜ್ ಮಾಡುತ್ತಿದ್ದರು. ಹೀಗಾಗಿ, ಘಟನೆ ತಾಯಿಯ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.

one-and-half-year-old-baby-girl-drowns-in-a-bucket-of-water-in-thiruvanthapuram
one-and-half-year-old-baby-girl-drowns-in-a-bucket-of-water-in-thiruvanthapuram

By

Published : Jun 15, 2022, 3:13 PM IST

ತಿರುವನಂತಪುರ: ಒಂದೂವರೆ ವರ್ಷದ ಹೆಣ್ಣು ಮಗುವೊಂದು ನೀರು ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನೆಡುಮಂಗಾಡ್‌ನ ಶಮ್ನಾದ್ ಮಂಜಿಲ್ ನಿವಾಸಿಗಳಾದ ಸಿದ್ದಿಕ್-ಸಜಿನಾ ದಂಪತಿಯ ನೈನಾ ಫಾತಿಮಾ ಹೆಸರಿನ ಹೆಣ್ಣುಮಗು ಮಂಗಳವಾರ ಸಂಜೆ ನೀರಲ್ಲಿ ಮುಳುಗಿ ಮೃತಪಟ್ಟಿದೆ.

ಘಟನೆ ನಡೆದ ಸಮಯದಲ್ಲಿ ಮಗು ಮತ್ತು ಮಗುವಿನ ತಾಯಿ ಮನೆಯಲ್ಲಿದ್ದರು. ಮಗು ನೀರಲ್ಲಿ ಮುಳುಗುತ್ತಿರುವಾಗ ತಾಯಿ ನಮಾಜ್ ಮಾಡುತ್ತಿದ್ದರು. ಹೀಗಾಗಿ ಘಟನೆ ತಾಯಿಯ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ABOUT THE AUTHOR

...view details