ಕರ್ನಾಟಕ

karnataka

ETV Bharat / bharat

ಒಬಿಸಿ, ದಲಿತ, ಬುಡಕಟ್ಟು ಜನರು ತಮ್ಮ ನಿಜವಾದ ಜನಸಂಖ್ಯೆ ಬಗ್ಗೆ ತಿಳಿದುಕೊಂಡರೆ ದೇಶದ ಚಿತ್ರಣ ಬದಲು: ರಾಹುಲ್ - ಛತ್ತೀಸ್‌ಗಢ ವಿಧಾನಸಭಾ ಚುನಾವಣೆ

Rahul Gandhi on caste census: ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ ಇಲ್ಲಿ ಜಾತಿ ಸಮೀಕ್ಷೆ ಆರಂಭವಾಗುತ್ತದೆ. ಒಬಿಸಿಗಳು, ದಲಿತ, ಬುಡಕಟ್ಟು ಜನಾಂಗದವರು ತಮ್ಮ ನಿಜವಾದ ಜನಸಂಖ್ಯೆ ಬಗ್ಗೆ ತಿಳಿದುಕೊಂಡರೆ ಇಡೀ ದೇಶದ ಚಿತ್ರಣವೇ ಬದಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

RAHUL
ರಾಹುಲ್ ಗಾಂಧಿ

By PTI

Published : Nov 16, 2023, 11:37 AM IST

ಬೆಮೆತಾರಾ(ಛತ್ತೀಸ್​ಗಢ): ಜಾತಿ ಗಣತಿ ನಡೆಸುವ ​ಪಕ್ಷದ ಬೇಡಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಇತರೆ ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ತಮ್ಮ ವಾಸ್ತವಿಕ ಜನಸಂಖ್ಯೆಯ ಲೆಕ್ಕ ಸಿಕ್ಕಾಗ ಈ ದೇಶದ ಚಿತ್ರಣವೇ ಬದಲಾಗುತ್ತದೆ ಎಂದು ತಿಳಿಸಿದರು.

ನವೆಂಬರ್ 17ರಂದು ನಡೆಯಲಿರುವ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಛತ್ತೀಸ್‌ಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 12,000 ಕೋಟಿ ರೂಪಾಯಿ ಮೌಲ್ಯದ ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ಪ್ರತಿದಿನ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಅವರು OBC ಪದವನ್ನು ಬಳಸಿ ಚುನಾಯಿತರಾದರು. ಆದರೆ, OBCಗಳಿಗೆ ಹಕ್ಕುಗಳನ್ನು ನೀಡುವ ಸಮಯ ಬಂದಾಗ ಕುಂಟು ನೆಪ ಹೇಳುತ್ತಿದ್ದಾರೆ. ಅವರು ಈ ಬಗ್ಗೆ ಸ್ಪಷ್ಟ ನಿಲುವು ತಳೆದಿಲ್ಲ. ನಾವು ಒಬಿಸಿ ಕುರಿತಾಗಿ ಮಾತನಾಡಿದರೆ ಕೇಂದ್ರ ಸರ್ಕಾರ ಒಬಿಸಿ ಸಮುದಾಯವೇ ಇಲ್ಲ ಎನ್ನುತ್ತದೆ. ಭಾರತದಲ್ಲಿ ಇರುವುದು ಒಂದೇ ಜಾತಿ, ಅದು ಬಡವರು ಎಂದು ಹೇಳುತ್ತಿದೆ. ಆದರೆ, ದೇಶದಲ್ಲಿ ಒಬಿಸಿ ಸಮುದಾಯ ಎಷ್ಟಿದೆ? ಇದನ್ನು ನಾವು ಪತ್ತೆ ಮಾಡಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಇದನ್ನೂ ಓದಿ:ಮೋದಿ ಸರ್ಕಾರದ ನೋಟು ಅಮಾನ್ಯೀಕರಣ: ಜನರು ಇನ್ನೂ ಉತ್ತರ ಹುಡುಕುತ್ತಲೇ ಇದ್ದಾರೆ.. ಕಾಂಗ್ರೆಸ್​

ದೇಶದಲ್ಲಿ ಎಷ್ಟು ಮಂದಿ ಒಬಿಸಿಗಳಿದ್ದಾರೆ ಎಂಬುದನ್ನು ನಾವು ಕಂಡುಹಿಡಿಯುತ್ತೇವೆ. ನರೇಂದ್ರ ಮೋದಿಯವರು ಜಾತಿ ಗಣತಿ ಮಾಡುತ್ತಾರೋ ಇಲ್ಲವೋ, ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನ ಇಲ್ಲಿ ಜಾತಿ ಸಮೀಕ್ಷೆ ಆರಂಭವಾಗುತ್ತದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ನಿರ್ಣಯವೇ ಜಾತಿ ಗಣತಿ ಆಗಿದೆ, ಇದೊಂದು ಐತಿಹಾಸಿಕ ನಿರ್ಧಾರವಾಗಲಿದೆ ಎಂದರು.

ಇದನ್ನೂ ಓದಿ:ಶೀಘ್ರವೇ ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಪ್ರಚಾರ ನಡೆಸಲಿದ್ದಾರೆ : ವದಂತಿಗೆ ತೆರೆ ಎಳೆದ ಕಾಂಗ್ರೆಸ್​

ದೇಶದಲ್ಲಿ ಒಬಿಸಿಗಳು, ದಲಿತರು ಮತ್ತು ಆದಿವಾಸಿಗಳು ತಮ್ಮ ನಿಜವಾದ ಜನಸಂಖ್ಯೆ ಮತ್ತು ನಿಜವಾದ ಶಕ್ತಿಯ ಬಗ್ಗೆ ತಿಳಿದುಕೊಳ್ಳುವ ದಿನ ಸನಿಹದಲ್ಲಿದೆ. ಆ ನಂತರ ಈ ದೇಶದ ಚಿತ್ರಣವೇ ಶಾಶ್ವತವಾಗಿ ಬದಲಾಗುತ್ತದೆ. ಇದು ಸ್ವಾತಂತ್ರ್ಯಾ ನಂತರದ ಅತಿದೊಡ್ಡ ಕ್ರಾಂತಿಕಾರಿ ನಿರ್ಧಾರವಾಗಿದೆ. ಕಾಂಗ್ರೆಸ್ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅದಾನಿ ಅವರಂತಹ ದೊಡ್ಡ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡುತ್ತದೆ ಎಂದು ದೂರಿದರು.

ಛತ್ತೀಸ್‌ಗಢದ 70 ವಿಧಾನಸಭಾ ಸ್ಥಾನಗಳಿಗೆ ಎರಡನೇ ಹಂತದ ಚುನಾವಣೆಯ ಪ್ರಚಾರಕ್ಕೆ ಬುಧವಾರ ಕೊನೆಯ ದಿನವಾಗಿತ್ತು. ಮೊದಲ ಹಂತದ 20 ಸ್ಥಾನಗಳಿಗೆ ನವೆಂಬರ್ 7 ರಂದು ಮತದಾನ ನಡೆಸಲಾಗಿದೆ.

ಇದನ್ನೂ ಓದಿ:ಅದಾನಿಯವರಂತಹ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಸಿಎಂ ಬಘೇಲ್.. ಮಾತಿನ ಭರದಲ್ಲಿ ರಾಹುಲ್​ ಗಾಂಧಿ ಎಡವಟ್ಟು, ವಿಡಿಯೋ ವೈರಲ್

ABOUT THE AUTHOR

...view details