ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ರಾಷ್ಟ್ರಾದ್ಯಂತ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್ ಅನ್ನು ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಈ ಹಬ್ಬವು ಒಂದು ತಿಂಗಳ ಪವಿತ್ರ ರಂಜಾನ್ ಆಚರಣೆ ಅಂತ್ಯವನ್ನು ಸೂಚಿಸುತ್ತದೆ. ಆದರೆ ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಮಾತ್ರ ಮೌನ ಆವರಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಮಸೀದಿಯಲ್ಲಿ ಈದ್ ನಮಾಜ್ ಮಾಡಿಲ್ಲ.
ಹೌದು, ಆಡಳಿತ ಮಂಡಳಿಯು ನಿಗದಿತ ಸಮಯದಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿರುವುದರಿಂದ ಈ ವರ್ಷವೂ ಪ್ರಾರ್ಥನೆ ನಡೆಯಲಿಲ್ಲ ಎಂದು ಮಸೀದಿ ಆಡಳಿತ ಸಮಿತಿಯ ಸದಸ್ಯರು ಹೇಳಿದ್ದಾರೆ. "ಇಂದು ಆಡಳಿತ ಮಂಡಳಿಯು ನಿಗದಿತ ಸಮಯಕ್ಕೆ ಬದಲಾಗಿ 7:30 ಕ್ಕೆ ಪ್ರಾರ್ಥನೆ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ, ನಮ್ಮ ಮನವಿಗಳ ಹೊರತಾಗಿಯೂ ಅವರು ಪ್ರಾರ್ಥನೆ ಮಾಡಲು ನಿರಾಕರಿಸಿದರು. ಪರಿಣಾಮವಾಗಿ ಈ ಬಾರಿ ಸಹ ಐತಿಹಾಸಿಕ ಮಸೀದಿಯಲ್ಲಿ ಪ್ರಾರ್ಥನೆಯನ್ನು ಮುಂದೂಡಲಾಯಿತು" ಎಂದು ಹೇಳಿದರು.
ಇನ್ನು ಜಾಮಿಯಾ ಮಸೀದಿ ಹೊರತುಪಡಿಸಿ ಜಮ್ಮು ಮತ್ತು ಕಾಶ್ಮೀರದ ಇತರ ಸ್ಥಳೀಯ ಮಸೀದಿಗಳಲ್ಲಿ ಈದ್ ಉಲ್ ಫಿತರ್ ಪ್ರಾರ್ಥನೆಗಳು ಸುಗಮವಾಗಿ ನಡೆದವು. ಈ ವೇಳೆ ಮುಸ್ಲಿಮರು ಕಾಶ್ಮೀರ ಕಣಿವೆಯ ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ಶ್ರೀನಗರ ಸೇರಿದಂತೆ ಕಣಿವೆಯ ಇತರ ಜಿಲ್ಲೆಗಳ ಸಣ್ಣ ಮತ್ತು ದೊಡ್ಡ ಮಸೀದಿಗಳಲ್ಲಿ ಇಂದು ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ಜೊತೆಗೆ, ಕಾಶ್ಮೀರ ಕಣಿವೆಯ ದರ್ಗಾ ಹಜರತ್ ಬಾಲ್‌ನಲ್ಲಿ ಅತಿದೊಡ್ಡ ಈದ್ ಪ್ರಾರ್ಥನೆ ಕೂಟವು ನಡೆಯಲಿದೆ.
ಇದನ್ನೂ ಓದಿ :ದೇಶಾದ್ಯಂತ ಈದ್ ಉಲ್ ಫಿತರ್ ಸಂಭ್ರಮ: ಪ್ರಧಾನಿ ಮೋದಿ ಶುಭ ಕೋರಿಕೆ