ಇಟಾನಗರ (ಅರುಣಾಚಲ ಪ್ರದೇಶ): ನಿನ್ನೆಯಷ್ಟೇ ಲಘು ಭೂಕಂಪನ ಸಂಭವಿಸಿದ್ದ ಅರುಣಾಚಲ ಪ್ರದೇಶದಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.0 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್ಸಿಎಸ್) ಮಾಹಿತಿ ನೀಡಿದೆ.
ಇಂದು ಬೆಳಗ್ಗೆ 6.09ಕ್ಕೆ ಇಟಾನಗರದಲ್ಲಿ ಲಘು ಭೂಕಂಪನ ಉಂಟಾಗಿದ್ದು, ಇಲ್ಲಿನ ಪಪುಂಪರೆ ಎಂಬ ಪ್ರದೇಶದಿಂದ 10 ಕಿಲೋ ಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಘಟನೆಯಿಂದ ಯಾವುದೇ ಸಾವು-ನೋವು, ಆಸ್ತಿಪಾಸ್ತಿ ಹಾನಿ ವರದಿಯಾಗಿಲ್ಲ.