ಕರ್ನಾಟಕ

karnataka

ETV Bharat / bharat

ಇಂದಿನಿಂದ 4ದಿನ ಕಾಲ ಶಬರಿಮಲೆಯಲ್ಲಿ ಓಣನಲ್​ ಆಚರಣೆ: ಪಂಬಾ ಸ್ನಾನಕ್ಕೆ ನಿಷೇಧ

ಇಂದಿನಿಂದ 4 ದಿನ ಕಾಲ ಶಬರಿಮಲೆ ದೇವಸ್ಥಾನದಲ್ಲಿ ಓಣಂ ಆಚರಣೆ ಮಾಡಲಾಗುತ್ತಿದ್ದು, ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸುವುದಾಗಿ ದೇವಸ್ಥಾನದ ಕಮಿಟಿ ತಿಳಿಸಿದೆ.

Sabarimala Sreedharm
ಶಬರಿಮಲೇಲಿ ಓಣಂ​ ಆಚರಣೆ

By

Published : Sep 6, 2022, 5:20 PM IST

ಪತ್ತನಂತಿಟ್ಟ(ಕೇರಳ):ರಾಜ್ಯದೆಲ್ಲೆಡೆ ಅದ್ಧೂರಿಯಾಗಿ ಓಣಂ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಇದೀಗ ಶಬರಿಮಲೆ ಕ್ಷೇತ್ರದಲ್ಲೂ ಓಣಂ ಆಚರಣೆಗೆ ಎಲ್ಲಾ ಸಿದ್ಧತೆಗಳು ನಡೆದಿವೆ. ಓಣನಲ್​ (ಓಣಂ) ಆಚರಣೆಗಾಗಿ ಇಂದು ಸಂಜೆ 5ಗಂಟೆಗೆ ಶಬರಿಮಲೆ ದೇವಸ್ಥಾನದ ಬಾಗಿಲುಗಳನ್ನು ತೆರೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಓಣಂ ಹಿನ್ನೆಲೆ ಸೆ.7 ರಿಂದ ಸೆ.10ರವರೆಗೆ ದೇವರ ದರ್ಶನಕ್ಕಾಗಿ ಭಕ್ತರಿಗೆ ಅನುಮತಿ ನೀಡಲಾಗಿದೆ. 4ದಿನಗಳ ಕಾಲ ದೇವಸ್ಥಾನದಲ್ಲಿ ಉದಯಾಸ್ತಮಯ ಪೂಜೆ ಸೇರಿದಂತೆ ಅಷ್ಟಾಭಿಷೇಕ, ಕಲಶಾಭಿಷೇಕ, ಪಡಿಪೂಜೆ, ಪುಷ್ಪಾಭಿಷೇಕ ನಡೆಯಲಿವೆ. ಸೆ.10ರಂದು ರಾತ್ರಿ 10 ಗಂಟೆಗೆ 'ಹರಿವರಾಸನಂ' ಹಾಡಿನ ಮೂಲಕ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುವುದು.

ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿರುವ ಹಿನ್ನೆಲೆ ದರ್ಶನ ಬುಕ್ಕಿಂಗ್​ ಕೌಂಟರ್​ಗಳನ್ನೂ ತೆರೆಯಲಾಗಿದೆ. ರಾಜ್ಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆ ಪಂಬಾನದಿ ಸ್ನಾನವನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಕಮಿಟಿ ತಿಳಿಸಿದೆ.

ಇದನ್ನೂ ಓದಿ:ಮಳೆ ಆರ್ಭಟಕ್ಕೆ ಜಲಾವೃತವಾದ ಯಲ್ಲಮ್ಮ ದೇವಸ್ಥಾನ

ABOUT THE AUTHOR

...view details