ಚಂಡೀಗಢ(ಪಂಜಾಬ):ವಾರಿಸ್ ಪಂಜಾಬ್ ಸಂಘಟನೆ ಮುಖ್ಯಸ್ಥ, ಖಲಿಸ್ಥಾನ ಪರ ಹೋರಾಟಗಾರ ಅಮೃತಪಾಲ್ ಸಿಂಗ್ನನ್ನುಅವರನ್ನು ಭಾನುವಾರ ಬೆಳಗ್ಗೆ ಪಂಜಾಬ್‌ನ ಮೋಗಾದಲ್ಲಿ ಬಂಧಿಸಿದ ಬಳಿಕ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಧೈರ್ಯ ತುಂಬಿದರು.
ಮಾಧ್ಯಮಗೋಷ್ಟಿಯಲ್ಲಿ ಇಂದು ಮಾತನಾಡಿದ ಅವರು, ಪೊಲೀಸರು ಖಲಿಸ್ಥಾನಿ ಐಕಾನ್‌ಗೆ ಹುಡುಕಾಟ ಆರಂಭಿಸಿ ಇಂದಿಗೆ 35 ದಿನಗಳು ಕಳೆದಿವೆ. ಆದರೆ ತಿಂಗಳ ಬಳಿಕ ಆರೋಪಿ ವಾರಿಸ್ ಪಂಜಾಬ್ ಸಂಘಟನೆ ಮುಖ್ಯಸ್ಥ ಅಮೃತಪಾಲ್ ಸಿಂಗ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದ ಅವರು, ಈ ವೇಳೆ ರಾಜ್ಯದಲ್ಲಿ ಶಾಂತಿ ಕಾಪಾಡಿದ್ದಕ್ಕಾಗಿ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಪಂಜಾಬ್‌ನ ಯುವಕರು ತಮ್ಮ ಕೈಯಲ್ಲಿ ಪದವಿ ಮತ್ತು ಕ್ರೀಡಾ ಪದಕ ಹೊಂದಬೇಕೆಂದು ನಾನು ಬಯಸುತ್ತೇನೆ. ನಮ್ಮ ರಾಜ್ಯದ ಯುವಕರು ಯಾವುದೇ ಆಮಿಷಕ್ಕೆ ಒಳಗಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿದರು.
ರಕ್ತಪಾತ ಬೇಕಿರಲಿಲ್ಲ: ಮಾರ್ಚ್ 18 ರಂದು ಸರ್ಕಾರ ಕ್ರಮ ಕೈಗೊಂಡಿದ್ದರೆ ಅದೇ ದಿನ ಅಮೃತ್ಪಾಲ್ನನ್ನು ಬಂಧಿಸಬಹುದಿತ್ತು. ಆದರೆ ಹಲವು ತಿಂಗಳಿನಿಂದ ಪಂಜಾಬ್‌ನಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದ ಸಿಎಂ, ಮಾರ್ಚ್ 18 ರಂದು ಕೆಲವು ಜನರು ಸಿಕ್ಕಿಬಿದ್ದಿದ್ದರು. ಆದರೆ ಅಂದು ಆಮ್ ಆದ್ಮಿ ಸರ್ಕಾರ ಯಾವುದೇ ಗುಂಡಿನ ದಾಳಿ ಅಥವಾ ರಕ್ತಪಾತವನ್ನು ಬಯಸಲಿಲ್ಲ ಎಂದರು.
ಗುರುಗ್ರಂಥ ಸಾಹಿಬ್ ಗುರಾಣಿಯಾಗಿ ಬಳಸಿಕೊಂಡರು:ಅಜ್ನಾಲಾ ಘಟನೆ ಬಗ್ಗೆ ಮಾತನಾಡಿದ ಸಿಎಂ ಮಾನ್, ಕೆಲವರು ಪೊಲೀಸ್ ಠಾಣೆ ಪ್ರವೇಶಿಸಲು ಗುರುಗ್ರಂಥ ಸಾಹಿಬ್ ಅನ್ನು ಗುರಾಣಿಯಾಗಿ ಬಳಸಿಕೊಂಡರು. ಕೆಲವರು ಗುರುಸಾಹೇಬರ ಪಲ್ಲಕ್ಕಿಯೊಂದಿಗೆ ಬಂದರು. ಅಂದು ಕೂಡ ಡಿಜಿಪಿಗೆ ಅದೇ ಸೂಚನೆ ನೀಡಿದ್ದು, ಏನೇ ಆಗಲಿ, ಗುರು ಸಾಹೇಬರ ಘನತೆಗೆ ಧಕ್ಕೆಯಾಗಬಾರದು. ಆದಾಗ್ಯೂ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಅಮೃತಪಾಲ್ ಸಿಂಗ್ನನ್ನು ಇಂದು ಬಂಧಿಸಲಾಗಿದೆ. ದೇಶದ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.