ಹೈದರಾಬಾದ್ :ಈ ವರ್ಷ ಟಾಲಿವುಡ್ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ನಟಿ ಅಂದ್ರೆ ಸಮಂತಾ. ತೆಲುಗು ನಟ ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿ ವೈವಾಹಿಕ ಜೀವನದಿಂದ ಹೊರ ಬಂದ ಸಮಂತಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ಇದೀಗ ನಟಿ ಸಮಂತಾ ಅವರು ವರ್ಷದ ಕೊನೆಯ ದಿನದಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಫೂರ್ತಿದಾಯಕ ಮಾತುಗಳುಳ್ಳ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿರುವಂತೆ 'ನೀವು ಯಾರ ಹಂಗಿಗೂ ಬೀಳಬೇಡಿ, ಒಂದೇ ವಿಚಾರಕ್ಕೆ ಅಂಟಿಕೊಳ್ಳಬೇಡಿ. ಸ್ವತಂತ್ರರಾಗಿ ಜೀವಿಸಿ' ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಅಲ್ಲದೇ, 'ಒಂದೇ ವಿಚಾರಕ್ಕೆ ಜೋತು ಬೀಳುವುದನ್ನು ಮೊದಲು ನಿಲ್ಲಿಸಿ. ಬೇರೆಯವರು ಏನು ತಿಳಿದುಕೊಳ್ಳುತ್ತಾರೋ, ಬೇರೆಯವರ ನಂಬಿಕೆ ಏನು?, ಅವರ ನಿರೀಕ್ಷೆ ಏನು ಎಂಬುದನ್ನು ಯೋಚಿಸಬೇಡಿ. ಈ ಎಲ್ಲಾ ಬಂಧನಗಳಿಂದ ಮೊದಲು ಹೊರ ಬನ್ನಿ. ಈ ಎಲ್ಲಾ ನಿರ್ಬಂಧಗಳು ಅವರಿಗೆ ಮಾತ್ರ ಸೀಮಿತ, ನಿಮಗಲ್ಲ. ನೀವು ಯಾವ ಕ್ಷಣದಲ್ಲಿ ಬೇಕಾದರೂ ಆ ಸರಳುಗಳಿಂದ ಹೊರಬರಬಹುದು' ಎಂಬುದು ಅವರ ಪೋಸ್ಟ್ನ ಸಾರವಾಗಿದೆ.