ಗಾಜಿಯಾಬಾದ್: ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ವ್ಯಕ್ತಿಯೋರ್ವ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಧಿಕಾರಿಗಳು ಪರಿಶೀಲನೆಗೆ ಎಂದು ಮನೆಗೆ ಬರುತ್ತಿರುವುದನ್ನು ಅರಿತ ವ್ಯಕ್ತಿ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡುವ ಸಂದರ್ಭದಲ್ಲೇ ತಗ್ಲಾಕೊಂಡಿದ್ದಾನೆ. ಸಿಬ್ಬಂದಿಯ ಈ ಚುರುಕಾದ ಕ್ರಮವನ್ನು ವಿದ್ಯುತ್ ಇಲಾಖೆ ಶ್ಲಾಘಿಸಿದೆ.
ವಿಡಿಯೋ: ಅಕ್ರಮವಾಗಿ ಪಡೆದ ವಿದ್ಯುತ್ ಸಂಪರ್ಕ ಕತ್ತರಿಸಲು ಹೋಗಿ ಅಧಿಕಾರಿಗಳ ಕೈಗೆ ಹೀಗೆ ಸಿಕ್ಕಿಬಿದ್ದ! - Uttar pradesh
ಅಕ್ರಮವಾಗಿ ಮನೆಗೆ ವಿದ್ಯುತ್ ಸಂಪರ್ಕ ಪಡೆದಿದ್ದ ವ್ಯಕ್ತಿಯೋರ್ವ ವಿದ್ಯುತ್ ಇಲಾಖೆಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಮನೆ ಮೇಲೆ ಸಂಪರ್ಕ ಪಡೆದಿದ್ದ ತಂತಿಯನ್ನು ತುಂಡು ಮಾಡಲು ತೆವಳಿಕೊಂಡು ಬಂದಿದ್ದ ವ್ಯಕ್ತಿಯ ದೃಶ್ಯ ಅಧಿಕಾರಿಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಅಕ್ರಮ ವಿದ್ಯುತ್ ತಂತಿ ಕತ್ತರಿಸಲು ಹೋಗಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ..!
ವಿದ್ಯುತ್ ಕಳ್ಳತನ ನಡೆಯುತ್ತಿದೆಯೇ? ಎಂದು ತನಿಖೆ ನಡೆಸಲು ವಿದ್ಯುತ್ ಇಲಾಖೆ ಅಧಿಕಾರಿಗಳು ವ್ಯಕ್ತಿಯ ಮನೆಗೆ ಬಂದಿದ್ದರು. ಕೂಡಲೇ ಎಚ್ಚೆತ್ತ ವ್ಯಕ್ತಿ ಅಕ್ರಮವಾಗಿ ಸಂಪರ್ಕ ಪಡೆದಿದ್ದ ವಿದ್ಯುತ್ ತಂತಿಯನ್ನು ತುಂಡರಿಸಲು ತೆವಳಿಕೊಂಡು ಸ್ಥಳಕ್ಕೆ ಬಂದಿದ್ದಾನೆ.
ಈ ವೇಳೆ ಮನೆಯ ಮೇಲ್ಛಾವಣಿ ಮೇಲೆ ಇದ್ದ ಅಧಿಕಾರಿಯೊಬ್ಬರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.