ಜೈಪುರ (ರಾಜಸ್ಥಾನ):ಜೈಪುರದಲ್ಲಿ ವ್ಯಕ್ತಿಯೊಬ್ಬ ವಿದೇಶಿ ಮಹಿಳಾ ಪ್ರವಾಸಿಗರನ್ನು ಅನುಚಿತವಾಗಿ ಸ್ಪರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಜೈಪುರ ನಗರದ ಸಿಂಧಿ ಕ್ಯಾಂಪ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯಾವಾಗ ಎಂಬುದು ಇನ್ನೂ ದೃಢಪಟ್ಟಿಲ್ಲ.
ವಿಡಿಯೋದಲ್ಲಿ ಮಹಿಳಾ ಪ್ರವಾಸಿ ಹಾಗೂ ಅವರ ಸಂಗಾತಿ ಮತ್ತು ಸ್ಥಳೀಯ ವ್ಯಕ್ತಿಯೊಬ್ಬ ಪ್ರವಾಸಿ ಮಹಿಳೆ ಜತೆ ಪದೇ ಪದೇ ಅಸಭ್ಯವಾಗಿ ಸ್ಪರ್ಶ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಮಹಿಳಾ ಪ್ರವಾಸಿ ಈ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು "ಸುಂದರ" ಮತ್ತು "ಧನ್ಯವಾದ" ಪದಗಳನ್ನು ಬಳಸುತ್ತಿದ್ದರೂ ಆತ ಮಾತ್ರ ಅದನ್ನು ಲೆಕ್ಕಿಸದೇ ಪ್ರವಾಸಿಗೆ ಸ್ಪರ್ಶಿಸುತ್ತಲೇ ನಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ನೋಡಲು 40ರ ಆಸುಪಾಸಿನಲ್ಲಿರುವಂತೆ ಕಾಣುತ್ತಿರುವ ವ್ಯಕ್ತಿ ಮಹಿಳೆಯ ಭುಜದ ಮೇಲೆ ಕೈ ಹಾಕುವ ಮೊದಲು "ಇಟ್ಸ್ ಮೈ ಪ್ಲಸರ್’’ ಎಂದು ಹೇಳುತ್ತಿದ್ದಾನೆ. ಹಾಗೆ ಸಂತೋಷ ಎನ್ನುತ್ತಲೇ ಮತ್ತೊಂದು ಕಡೆಯಿಂದ ಮಹಿಳಾ ಪ್ರವಾಸಿಯ ಇನ್ನೊಂದು ತೋಳನ್ನು ಹಿಡಿಯುತ್ತಾನೆ. ಒಂದು ಕ್ಷಣದಲ್ಲಿ ಅವರ ಮೈ, ಕೈ ಸೇರಿ ದೇಹದ ಭಾಗಗಳನ್ನು ಸ್ಪರ್ಶಿಸುವ ಯತ್ನವನ್ನು ಸ್ಥಳೀಯ ವ್ಯಕ್ತಿ ಮಾಡಿದ್ದಾರೆ.
ವಿದೇಶಿ ಮಹಿಳಾ ಪ್ರವಾಸಿ ಜತೆ ಸ್ಥಳೀಯನೊಬ್ಬ ನಡೆದುಕೊಂಡ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಾಲತಾಣಿಗರೊಬ್ಬರು, ’’ಪಿರಿಯಡ್ ಪ್ಯಾಡ್‌ಗಳು ಅಥವಾ ಕಾಂಡೋಮ್ ಜಾಹೀರಾತುಗಳು ಕಾಣಿಸಿಕೊಂಡಾಗ, ಮನೆಯಲ್ಲಿ ಪೋಷಕರು ಟಿವಿ ಆಫ್ ಮಾಡುತ್ತಾರೆ" ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರ, "ನಾನೇ ಆಗಿದ್ದರೆ, ಜನರಿಗೆ ಕಿರುಕುಳ ನೀಡುವುದು ಸರಿಯಲ್ಲ ಎಂದಿದ್ದು, ಕೈಗೆ ಸಿಕ್ಕರೆ ಆ ವ್ಯಕ್ತಿಯನ್ನು ಏನು ಮಾಡುತ್ತೇನೆ ನನಗೆ ಗೊತ್ತಿಲ್ಲ’’ ಎಂದು ಆಕ್ರೋಶ ಹೊರ ಹಾಕಿದ್ದಾರೆ.