ಕರ್ನಾಟಕ

karnataka

ETV Bharat / bharat

10 ರೂಪಾಯಿಗೆ ನಮ್ಮ ಪಕ್ಷದ ಸದಸ್ಯತ್ವ ಪಡೆದರೆ, 3 ವರ್ಷ ಭದ್ರತೆ ಕೊಡುತ್ತೇವೆ: ಹೀಗೊಂದು ಅಭಿಯಾನ - 10 ರೂಪಾಯಿಗೆ ನಮ್ಮ ಪಕ್ಷದ ಸದಸ್ಯತ್ವ ಪಡೆದರೆ

ಎಸ್​​ಬಿಎಸ್​ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಓಂಪ್ರಕಾಶ್ ರಾಜ್‌ಭರ್ ತಮ್ಮ ಪಕ್ಷದ ಸದಸ್ಯತ್ವ ಅಭಿಯಾನವನ್ನು ವಿನೂತನವಾಗಿ ನಡೆಸುತ್ತಿದ್ದಾರೆ. ಪಕ್ಷದ ಸದಸ್ಯರಾದವರೆಗೆ ಪೊಲೀಸ್ ಠಾಣೆ, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಪರಿಹರಿಸಲಾಗುತ್ತದೆ ಎಂದು ಹೇಳಿದ್ದಾರೆ.

omprakash-rajbhar-viral-video-10-rupees-security-guarantee-for-3-years
10 ರೂಪಾಯಿಗೆ ನಮ್ಮ ಪಕ್ಷದ ಸದಸ್ಯತ್ವ ಪಡೆದರೆ, 3 ವರ್ಷ ಭದ್ರತೆ ಕೊಡುತ್ತೇವೆ: ಹೀಗೊಂದು ಅಭಿಯಾನ

By

Published : Jan 6, 2023, 10:05 PM IST

Updated : Jan 6, 2023, 10:57 PM IST

10 ರೂಪಾಯಿಗೆ ನಮ್ಮ ಪಕ್ಷದ ಸದಸ್ಯತ್ವ ಪಡೆದರೆ, 3 ವರ್ಷ ಭದ್ರತೆ ಕೊಡುತ್ತೇವೆ: ಹೀಗೊಂದು ಅಭಿಯಾನ

ಬಲಿಯಾ (ಉತ್ತರ ಪ್ರದೇಶ): ರಾಜಕೀಯ ಪಕ್ಷಗಳಿಗೆ ಸದಸ್ಯತ್ವವೇ ಜೀವಾಳ. ಪಕ್ಷದಲ್ಲಿ ಹೆಚ್ಚು ಸದಸ್ಯರನ್ನು ಹೊಂದಿದಷ್ಟು ಪಕ್ಷ ಪ್ರಬಲವಾಗಿದೆ ಎಂಬ ಸಂದೇಶವನ್ನು ಈ ಸದಸ್ಯತ್ವದಿಂದ ಸಾರಿದಂತೆ ಆಗುತ್ತದೆ. ಹೀಗಾಗಿಯೇ ತಮ್ಮ ಪಕ್ಷದ ಸಿದ್ಧಾಂತಗಳು ಮತ್ತು ಇತರ ವಿಷಯಗಳ ಆಧಾರದ ಎಲ್ಲ ಪಕ್ಷಗಳು ಆಗ್ಗಾಗ್ಗೆ ವಿಶೇಷ ಸದಸ್ಯತ್ವ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತದೆ. ಅದೇ ರೀತಿಯಾಗಿ ಉತ್ತರ ಪ್ರದೇಶದ ಸುಹಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್​​ಬಿಎಸ್​ಪಿ)ದ ರಾಷ್ಟ್ರೀಯ ಅಧ್ಯಕ್ಷ ಓಂಪ್ರಕಾಶ್ ರಾಜ್‌ಭರ್ ತಮ್ಮ ಪಕ್ಷದ ಸದಸ್ಯತ್ವ ಪಡೆಯುವ ಕುರಿತು ನೀಡಿರುವ ಹೇಳಿಕೆಯೊಂದು ಸಾಕಷ್ಟು ಸದ್ದು ಮಾಡುತ್ತಿದೆ.

ಓಂಪ್ರಕಾಶ್ ರಾಜ್‌ಭರ್ ತಮ್ಮ ಎಸ್​​ಬಿಎಸ್​ಪಿ ಪಕ್ಷದ ಸದಸ್ಯತ್ವಕ್ಕೆ 10 ರೂಪಾಯಿ ನಿಗದಿ ಮಾಡಿದ್ದಾರೆ. ಈ 10 ರೂಪಾಯಿಯ ರಶೀದಿ ಪಡೆದು ಪಡೆದು ಪಕ್ಷದ ಸದಸ್ಯರಾಗುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಇದರೊಂದಿಗೆ ಮೂರು ವರ್ಷಗಳ ಕಾಲ ಸದಸ್ಯತ್ವ ನೀಡಲಾಗುತ್ತಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ಸದಸ್ಯತ್ವ ಹೊಂದಿದವರು ಯಾವುದೇ ತೊಂದರೆಗೆ ಸಿಲುಕಿದರೂ ಕೂಡ ಅವರನ್ನು ಪಾರು ಮಾಡುವುದಾಗಿ ಸಾಮಾಜಿಕ ಭದ್ರತೆಯ ಗ್ಯಾರಂಟಿಯನ್ನೂ ಅವರು ನೀಡುತ್ತಿದ್ದಾರೆ. ಈ ಹೇಳಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಭದ್ರತೆ ಹೇಗೆ ?: ಎಸ್​​ಬಿಎಸ್​ಪಿ ರಾಷ್ಟ್ರೀಯ ಅಧ್ಯಕ್ಷರಾದ ಓಂಪ್ರಕಾಶ್ ರಾಜ್‌ಭರ್ ಈ ಹೇಳಿಕೆಯ ವಿಡಿಯೋ 2 ನಿಮಿಷ 49 ಸೆಕೆಂಡುಗಳ ಕಾಲ ಇದೆ. ಸಂಪೂರ್ಣವಾದ ವಿಡಿಯೋ ಸಾಕಷ್ಟು ಹರಿದಾಡುತ್ತಿದ್ದು, ಹೆಚ್ಚು ಜನಪ್ರಿಯತೆಯನ್ನೂ ಪಡೆಯುತ್ತಿದೆ. ಇತ್ತೀಚೆಗೆ ತಮ್ಮ ಪಕ್ಷದ ರಾಸ್ರಾ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಪಕ್ಷದ ಸದಸ್ಯತ್ವವನ್ನು ತೆಗೆದುಕೊಳ್ಳುವಂತೆ ಅಲ್ಲಿ ನೆರೆದಿದ್ದ ಜನರನ್ನು ಪ್ರೇರೇಪಿಸಿದರು. ಇದೇ ವೇಳೆ, ಪಕ್ಷದ ಸದಸ್ಯತ್ವ ಪಡೆದರೆ ಸಾಮಾಜಿಕ ಭದ್ರತೆಯನ್ನೂ ನೀಡುವುದಾಗಿ ಅವರು ಭರವಸೆ ನೀಡಿದರು.

ಹತ್ತು ರೂಪಾಯಿ ಕೊಟ್ಟು ಪಕ್ಷದ ಸದಸ್ಯರಾದವರಿಗೆ ಒಂದು ರಶೀದಿ ನೀಡಲಾಗುತ್ತಿದೆ. ಇದೇ ರಶೀದಿಯು ನಿಮಗೆ ಮೂರು ವರ್ಷಗಳ ಸಮಸ್ಯೆ ನಿವಾರಣೆ ಮತ್ತು ಸಾಮಾಜಿಕ ಭದ್ರತೆಯ ಗ್ಯಾರಂಟಿಯನ್ನೂ ನೀಡುತ್ತಿದೆ ಎಂದು ವಿಚಿತ್ರ ಹೇಳಿಕೆ ನೀಡಿದ್ದಾರೆ. ಮುಂದುವರಿದು ಸಾಮಾಜಿಕ ಭದ್ರತೆ ಹೇಗೆ ಎಂಬ ಬಗೆಯೂ ರಾಜ್​ಭರ್​ ವಿವರಿಸಿದ್ದಾರೆ. ಪಕ್ಷದ ಸದಸ್ಯರಾದ ನಂತರ ಪೊಲೀಸ್ ಠಾಣೆ, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಯಾವುದೇ ಸಮಸ್ಯೆ ಎದುರಾದರೂ, ಪಕ್ಷವು ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಸುಖ - ದುಃಖದಲ್ಲೂ ಪಕ್ಷ ಭಾಗಿಯಾಗುತ್ತದೆ. ಇದಕ್ಕಾಗಿ ಒಂದೇ ರೂಪಾಯಿ ಹಣ ತೆಗೆದುಕೊಳ್ಳದೆ ಮನೆ ಬಾಗಿಲಿಗೆ ಬಂದು ಸಂಪೂರ್ಣ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಪಕ್ಷದ ಸದಸ್ಯತ್ವ ಹೊಂದಿದವರ ನೆರವಿಗೆ ಪಕ್ಷದ ಪ್ರತಿಯೊಬ್ಬರು ಕೂಡ ಬರುತ್ತಾರೆ. ಇದರಲ್ಲಿ ಸಣ್ಣವರು, ದೊಡ್ಡವರು ಎಂಬ ಭೇದ ಎನ್ನವುದೇ ಇರಲ್ಲ. ಪಕ್ಷದ ಮುಖಂಡರು, ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರು, ಉತ್ತರ ಪ್ರದೇಶದ ನಾಯಕರು, ವಿಧಾನಸಭೆ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಸಹ ಮುಂದೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಕ್ಷಕ್ಕಾಗಿ 100 ರೂಪಾಯಿ ದೇಣಿಗೆ ನೀಡುವಂತೆಯೂ ಪಕ್ಷದ ಕಾರ್ಯಕರ್ತರಲ್ಲಿ ಓಂಪ್ರಕಾಶ್ ರಾಜ್‌ಭರ್ ಮನವಿ ಮಾಡಿದ್ದಾರೆ. ಅಲ್ಲದೇ, ನಿಮ್ಮ ಕಾರಿಗೆ 50 ರೂಪಾಯಿ ಪೆಟ್ರೋಲ್ ಹಾಕಿಸಿ, ಉಳಿದ 50 ರೂಪಾಯಿಯನ್ನು ಆಫೀಸ್‌ನಲ್ಲಿ ಠೇವಣಿ ಮಾಡಿ. ಏಕೆಂದರೆ ಕಚೇರಿಯಲ್ಲಿ ಟೆಲಿಫೋನ್ ಬಿಲ್ ಜಮಾ ಮಾಡಬೇಕು ಮತ್ತು ಅದೇ ಹಣದಿಂದ ನಾವು ಕಾರು ಓಡಿಸಲು ನೆರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಮಾತುಗಳನ್ನು ಕೇಳಿದ ಪಕ್ಷದ ಕಾರ್ಯಕರ್ತರೇ ನಗೆಗಡಲಲ್ಲಿ ತೇಲಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ತಾಯಿ ಸೋನಿಯಾ ಆರೋಗ್ಯ ವಿಚಾರಿಸಿದ ರಾಹುಲ್​: ಭಾರತ್​ ಜೋಡೋ ಯಾತ್ರೆಯಲ್ಲಿ ನಮಾಜ್​ ಸಲ್ಲಿಸಿದ ಮಹಿಳೆ

Last Updated : Jan 6, 2023, 10:57 PM IST

ABOUT THE AUTHOR

...view details