ನವದೆಹಲಿ:ಭಾರತದ 17 ರಾಜ್ಯಗಳಲ್ಲಿ ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 400ರ ಗಡಿ ದಾಟಿದೆ. ಈವರೆಗೆ ಒಟ್ಟು 436 ಒಮಿಕ್ರಾನ್ ಕೇಸ್ಗಳು ವರದಿಯಾಗಿವೆ. ಈ ಪೈಕಿ 115 ಮಂದಿ ಹೊಸ ರೂಪಾಂತರಿಯಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
108 ಸೋಂಕಿತರೊಂದಿಗೆ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ದೆಹಲಿ (79), ಗುಜರಾತ್ (43), ರಾಜಸ್ಥಾನ (43), ತೆಲಂಗಾಣ (38), ಕೇರಳ (37), ತಮಿಳುನಾಡು (34) ಹಾಗೂ ಕರ್ನಾಟಕ (31) ರಾಜ್ಯಗಳು ನಂತರದ ಸ್ಥಾನದಲ್ಲಿದೆ. ಈಶಾನ್ಯದ ಯಾವುದೇ ರಾಜ್ಯವು ಒಮಿಕ್ರಾನ್ ಪ್ರಕರಣವನ್ನು ವರದಿ ಮಾಡಿಲ್ಲ.